ಉತ್ತರಕನ್ನಡ : ಆಸ್ತಿ ಗಾಗಿ ನಾಲ್ವರನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪ ಮಗನಿಗೆ ಇದೀಗ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಅಪ್ಪನಿಗೆ ಜೀವಾವಧಿ ಮತ್ತು ಮಗನಿಗೆ ಗಲ್ಲು ಶಿಕ್ಷೆ ವಿಧಿಸಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಪ್ರಕರಣ ಹಿನ್ನೆಲೆ?
2013 ಫೆಬ್ರವರಿ 24ರಂದು ಹಾಡುಹಳ್ಳಿಯಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುಹಳ್ಳಿ ಗ್ರಾಮದಲ್ಲಿ ಆಸ್ತಿಗಾಗಿ ಸೊಸೆಯಾದ ವಿದ್ಯಾ ಭಟ್ ತಂದೆ ಶ್ರೀಧರ್, ಹಾಗೂ ವಿದ್ಯಾ ಭಟ್ ತಮ್ಮನಾದ ಜನಾರ್ಧನ ಭಟ್ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿದ್ದರು.
ವಿದ್ಯಾ ಭಟ್ ಳ ಅತ್ತೆ, ಮಾವ, ಮೈದುನ ಹಾಗೂ ಮೈದುನನ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದರು. ಅನಾರೋಗ್ಯದಿಂದ ಪತಿ ಮೃತಪಟ್ಟ ಬಳಿಕ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕೊಟ್ಟಿದ್ದಕ್ಕೆ ಸೊಸೆ ವಿದ್ಯಾ ಭಟ್ ತಕರಾರು ತೆಗೆದಿದ್ದಾರೆ. ವಿದ್ಯಾ ಭಟ್ ಕಲಹದ ಹಿಂದೆ ತಂದೆ ಮತ್ತು ಆಕೆಯ ತಮ್ಮನ ಬೆಂಬಲವಿತ್ತು.
ಶಂಭೋ ಭಟ್, ಮಹಾದೇವಿ ಭಟ್, ರಾಘವೇಂದ್ರ ಭಟ್ ಹಾಗು ಕುಸುಮ ಭಟ್ ರನ್ನು ಜನಾರ್ಧನ ಮತ್ತು ಶ್ರೀಧರ್ ಇಬ್ಬರೂ ಭೀಕರವಾಗಿ ಕೊಲೆ ಮಾಡಿದ್ದರು. ಈಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಕನ್ನಡ ಜಿಲ್ಲೆ ನ್ಯಾಯಾಲಯ ತಂದೆಗೆ ಜೀವಾವಧಿ ಶಿಕ್ಷೆ ಹಾಗೂ ಮಗನಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.