ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ MLC ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಈ ಒಂದು ಮುಡಾ ಕೇಸ್ ಇಡಿ ಹಾಗು ಸಿಬಿಐ ತನಿಖೆಗೆ ಕೊಟ್ಟರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದು ತಿಳಿಸಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆದರುವ ಅವಶ್ಯಕತೆ ಇಲ್ಲ. ಮುಡಾ ಕೇಸ್ ಗು ಜಾತಿ ಗಣತಿ ವರದಿ ಮಂಡನೆಗು ಯಾವುದೇ ರೀತಿಯಾದ ಸಂಬಂಧವಿಲ್ಲ. ಜಾತಿ ಗಣತಿ ಮಾಡಬೇಕು ಸಿಎಂ ಸಿದ್ದರಾಮಯ್ಯ ಅವರ ಬದ್ಧತೆ, ಮುಡಾ ಕೇಸ್ ಇಡಿಗೆ ವಹಿಸಿದರೆ ರಾಜೀನಾಮೆ ಪರಿಸ್ಥಿತಿ ಬರುವುದಿಲ್ಲ ಎಂದು ಅವರು ತಿಳಿಸಿದರು.
ಮುಡಾ ಕೇಸ್ನಲ್ಲಿ ಏನು ಸತ್ಯಾಂಶ ಇಲ್ಲ. ಇಡಿ ಅಧಿಕಾರಿಗಳು ಬೇಕು ಅಂತಲೇ ಹಿಂಸೆ ಕೊಡುತ್ತಿದ್ದಾರೆ. ಮುಡಾ ಕೇಸ್ನಲ್ಲಿ ಕಾನೂನಾತ್ಮಕ ಹೋರಾಟ ಮುಂದುವರಿಸುತ್ತೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯಲ್ಲಿ ಮುಂದುವರೆಯುತ್ತಾರೆ. ಮುಡಾ ಕೇಸ್ ಸಿಬಿಐಗೆ ಬೇಕಾದರೂ ಕೊಡಲಿ ನಾವು ತಪ್ಪು ಮಾಡಿಲ್ಲ ಎಂದು ಮೈಸೂರಿನಲ್ಲಿ ಎಂ ಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.