ಮೈಸೂರು : ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಆದೇಶ ನೀಡಲಾಗಿತ್ತು. ಇದೆ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಮೂವರು ಪಾಕಿಸ್ತಾನಿ ಮಕ್ಕಳಿಂದ ಇದೀಗ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪಾಕಿಸ್ತಾನಿ ತಂದೆಮೈಸೂರು ತಾಯಿಗೆ ಮೂವರು ಮಕ್ಕಳು ಜನಿಸಿದ್ದಾರೆ.
ಬೀಬಿ ಯಮೀನಾ, ಮೊಹಮ್ಮದ್ ಮುದಸ್ಸಿರ್ ಹಾಗು ಮೊಹಮ್ಮದ್ ಯೂಸುಫ್ ಎಂಬ ಮಕ್ಕಳ ಪರವಾಗಿ ತಾಯಿ ರಾಂಷಾ ಜಹಾನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮಕ್ಕಳ ಪರವಾಗಿ ತಾಯಿ ಮೈಸೂರಿನ ರಾಂಷಾ ಜಹಾನ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಕುರಿತಂತೆ ಕೇಂದ್ರಕ್ಕೆ ನೋಟಿಸ್ ಮತ್ತು ವಿಚಾರಣೆ ಮೇ 8 ರಂದು ಹೈಕೋರ್ಟ್ ನಿಗದಿಪಡಿಸಿತು.
ಪಾಕಿಸ್ತಾನದ ಮೊಹಮ್ಮದ್ ಫಾರೂಕ್ ಎಂಬಾತನೊಂದಿಗೆ ರಾಂಷ ಜಹಾನ್ ಮದುವೆಯಾಗಿದ್ದಾರೆ. 2015 ಸೆಪ್ಟೆಂಬರ್ 9 ರಲ್ಲಿ ಪಾಕಿಸ್ತಾನದ ಪಿಶಿನ್ ಎಂಬಲ್ಲಿ ಷರಿಯತ್ ನಂತೆ ವಿವಾಹವಾಗಿದ್ದಾರೆ. ಪಾಕಿಸ್ತಾನದ ಮಕ್ಕಳಿಗೆ ಪಾಕಿಸ್ತಾನಿ ಪೌರತ್ವ ನೀಡಲಾಗಿದ್ದು, ಆದರೆ ತಾಯಿ ರಾಂಷಾ ಜಹಾನ್ ಪಾಕಿಸ್ತಾನಿ ಪೌರತ್ವವನ್ನು ಪಡೆದಿರಲಿಲ್ಲ.
2025 ಜನವರಿ 4ರಂದು ವೀಸಾ ಪಡೆದು ಭಾರತಕ್ಕೆ ಮಕ್ಕಳೊಂದಿಗೆ ಬಂದಿದ್ದರು. ಭಾರತದಲ್ಲಿರಲು 18ರವರೆಗೆ ನೀಡಿದ್ದ ವಿಸಾವನ್ನು ಇದೀಗ ಸರ್ಕಾರ ರದ್ದುಪಡಿಸಿದೆ. ಏಪ್ರಿಲ್ 30ರ ಒಳಗೆ ದೇಶ ಬಿಡುವಂತೆ ಸೂಚಿಸಿದ್ದರಿಂದ ಅಟ್ಟಾರಿ ಗಡಿಯವರೆಗೆ ತೆರಳಿದ್ದರು. ಕರೆದೊಯ್ಯಲು ತಂದೆ ಗಡಿಗೆ ಬರದಿದ್ದರಿಂದ ಮತ್ತೆ ಮಕ್ಕಳು ಮೈಸೂರಿಗೆ ವಾಪಸ್ ಆಗಿದ್ದಾರೆ. ಬಲವಂತದ ಕ್ರಮದ ಭೀತಿಯಿಂದ ಹೈಕೋರ್ಟ್ ಗೆ ಮಕ್ಕಳಿಂದ ಅರ್ಜಿ ಸಲ್ಲಿಕೆಯಾಗಿದೆ ಭಾರತದಿಂದ ತೆರಳಲು ಮೇ 15ರವರೆಗೆ ಕಾಲಾವಕಾಶಕ್ಕೆ ಮನವಿ ಮಾಡಲಾಗಿದೆ.