ಬೆಳಗಾವಿ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಿತ್ತಾಟ ಜೋರಾಗಿತ್ತು ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮೂಲಕ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ನಾವು ಸಹೋದರರು ಇದ್ದಂತೆ ಇದ್ದೇವೆ ಎಂದು ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಿದರು.
ಆದರೆ ಕಳೆದ ಎರಡು ದಿನಗಳಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ರಾಜ್ಯದಲ್ಲಿ ಯಾವುದೇ ರೀತಿಯಾಗಿ ನಾಯಕತ್ವ ಬದಲಾವಣೆ ಇಲ್ಲ ಎಂದು ಪದೇಪದೇ ಹೇಳಿಕೆ ನೀಡುತ್ತಿದ್ದಾರೆ ಇವರ ಒಂದು ಹೇಳಿಕೆಗೆ ಸ್ವಪಕ್ಷದ ಹಲವು ಶಾಸಕರು ಸಚಿವರು ಯತೀಂದ್ರ ವಿರುದ್ಧ ಆಕ್ರಶ ಹೊರಹಾಕಿದ್ದು ನಾವು ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡಿದರೆ ನೋಟಿಸ್ ಕೊಡುತ್ತಾರೆ ಆದರೆ ಯತಿಂದ್ರ ವಿರುದ್ಧ ಯಾಕೆ ಇನ್ನು ನೋಟಿಸ್ ನೀಡುವ ಕ್ರಮ ಆಗಿಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದರ ಮಧ್ಯ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಆಪ್ತ ಸಚಿವರು ಹಾಗೂ ಶಾಸಕರ ಜೊತೆ ಡಿನ್ನರ್ ಮೀಟಿಂಗ್ ನಡೆಸಿದ್ದು ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ. ಈ ವೇಳೆ ನೂರಕ್ಕೂ ಹೆಚ್ಚು ಶಾಸಕರು ನಮ್ಮೊಂದಿಗೆ ಇದ್ದಾರೆ. ಸಿದ್ದರಾಮಯ್ಯ ಪರ ನಿಂತಿರುವ ಸಚಿವರ ಲಿಸ್ಟ್ ಸಹ ಡಿಸಿಎಂ ಡಿಕೆ ಶಿವಕುಮಾರ್ ಈ ವೇಳೆ ಮಾಡಿದ್ದಾರೆ ಡಿನ್ನರ್ ಪಾರ್ಟಿ ಮೂಲಕ ಡಿಕೆ ಶಿವಕುಮಾರ್ ರಾಜಕೀಯ ಸಂದೇಶ ನೀಡಿದ್ದು, ಸಚಿವರು ಸೇರಿದಂತೆ 40 ಶಾಸಕರು ಎಂಎಲ್‌ಸಿಗಳೊಂದಿಗೆ ಡಿಕೆ ಶಿವಕುಮಾರ್ ಡಿನ್ನರ್ ರಾಜಕಾರಣ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.
ನಿನ್ನೆ ನಡೆದ ಡಿನ್ನರ್ ಮೀಟಿಂಗ್ ನಲ್ಲಿ ಶರಣ ಪ್ರಕಾಶ್ ಪಾಟೀಲ್, ಎಂಸಿ ಸುಧಾಕರ್, ಕೆ ಎಚ್ ಮುನಿಯಪ್ಪ, ಎನ್‌ಟಿ ಶ್ರೀನಿವಾಸ್ ಡಾ. ಎಚ್ ಡಿ ರಂಗನಾಥ್ ಟಿ ಡಿ ರಾಜೇಗೌಡ ಎನ್ ಎ ಹ್ಯಾರಿಸ್ ಸೇರಿದಂತೆ ಇನ್ನೂ ಅನೇಕರು ಸಚಿವರು ಶಾಸಕರು ಈ ಒಂದು ಡಿನ್ನರ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು.








