ಬೆಳಗಾವಿ : ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಗಾಂಧಿ ಭಾರತ್ ಸಮಾವೇಶದಲ್ಲಿ ಮಹಾತ್ಮ ಗಾಂಧಿ ಬೃಹತ್ ಪುತ್ಥಳಿಯನ್ನು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾವರಣಗೊಳಿಸಿದರು. ಸಮಾವೇಶದ ಕುರಿತು ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮಿತ್ ಶಾ ಹಾಗೂ ಕೆಲವು ಚಮಚಗಳು ಅಭಿವೃದ್ಧಿ ಮಾಡೋಕೆ ಆಗದೆ ಗಾಂಧಿ ಕುಟುಂಬಕ್ಕೆ ಬೈಯುತ್ತಾರೆ ಎಂದು ವಾಗ್ದಾಳಿ ಎಂದು ನಡೆಸಿದರು.
ಇಂದು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಗಾಂಧಿ ಭಾರತ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, RSS, ಬಿಜೆಪಿಯವರು ಯಾವಾಗಲೂ ದಲಿತ ವಿರೋಧಿಗಳು. ಬಡವರು ರೈತರು ಕೂಲಿಕಾರ್ಮಿಕರ ಬಗ್ಗೆ ಬಿಜೆಪಿಯವರಿಗೆ ಚಿಂತೆ ಇಲ್ಲ. ದೇಶಕ್ಕಾಗಿ ಚೆನ್ನಮ್ಮ ಹೋರಾಟ ಮಾಡಿದ ನೆಲ ಇದು. ಗಾಂಧಿ ಕುಟುಂಬಕ್ಕೆ ಪ್ರಧಾನಿ ಮೋದಿ ಅಮಿತ್ ಶಾ ಹಾಗೂ ಚಮಚಗಳು ಬೈಯುತ್ತಾರೆ. ಕೆಲಸ ಮಾಡಲು ಆಗದೆ ಗಾಂಧಿ ಕುಟುಂಬದ ಬಗ್ಗೆ ಬೈಯುತ್ತಾರೆ.
ನಾಥುರಾಮ್ ಗೋಡ್ಸೆ ಸಾವರ್ಕರ್ ಶಿಷ್ಯ. ಗಾಂಧೀಜಿಯನ್ನ ಕೊಂದ ಗೋಡ್ಸೆಯನ್ನು ಮೋದಿ ಪೂಜೆ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.ಡಿಸೆಂಬರ್ 27ರಂದು ಗಾಂಧಿ ಭಾರತ ಸಮಾವೇಶ ನಡೆಯಬೇಕಿತ್ತು. ಆದರೆ ಮಾಜಿ ಪ್ರಧಾನಿ ಮನೋವನ್ ಸಿಂಗ್ ಅವರ ನಿಧನದಿಂದ ಕಾರ್ಯಕ್ರಮ ಮುಂದೂಡಲಾಗಿದೆ.
ಬಿಜೆಪಿಯವರು ಯಾವತ್ತೂ ದಲಿತ ಸಮುದಾಯದ ವಿರೋಧಿಗಳು. ಬಿಜೆಪಿ ಆರ್‌ಎಸ್‌ಎಸ್ ಹಿಂದೂಮಹಾ ಸಭಾ ದಲಿತರ ಪರ ಇಲ್ಲ. ಬಿಜೆಪಿಯವರು ದಲಿತರ ಉದ್ಧಾರ ಮಾಡುತ್ತೇವೆ ಎಂದು ಓಡಾಡುತ್ತಿದ್ದಾರೆ ಕರ್ನಾಟಕ ರಾಜ್ಯದಲ್ಲಿ ಬಲಿಷ್ಠ ವಾಗಿರುವುದು ಕಾಂಗ್ರೆಸ್ ಪಕ್ಷ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಒಳ್ಳೆಯ ಯೋಜನೆಗಳು ಕೊಟ್ಟಿದೆ ಎಂದು ತಿಳಿಸಿದರು.
ಸೋನಿಯಾ ಗಾಂಧಿಯವರು ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದರು, ಮನಮೋಹನ್ ಸಿಂಗ್ ಅವರನ್ನು ಸೋನಿಯಾ ಗಾಂಧಿ ಪಿಎಂ ಮಾಡಿದರು. ದೇಶಕ್ಕಾಗಿ ರಾಜೀವ್ ಗಾಂಧಿ ಸೋನಿಯಾ ಗಾಂಧಿ ತ್ಯಾಗ ಮಾಡಿದರು ನಾವು ತ್ಯಾಗ ಮಾಡಲು ಸಾಧ್ಯವಾ? ಎಂದು ಪ್ರಶ್ನಿಸಿದರು. ನಾವು ಕೊಟ್ಟ ಯೋಜನೆ ಟೀಕೆ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಬಡವರ ಪರ ಪಕ್ಷ. ಇಂದಿರಾಗಾಂಧಿ 10 ಪಾಯಿಂಟ್ ಯೋಜನೆ ಜಾರಿ ಮಾಡಿದರು. ನನಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಲ್ಲರಿಗೂ ನಾನು ಚಿರಋಣಿ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.