ಕೋಲಾರ : ಶಾಸಕ ಯತ್ನಾಳ್ ಕಾಂಗ್ರೆಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿರಬಹುದು. ಕಾಂಗ್ರೆಸ್ ಬೆಂಬಲದಿಂದ ಯತ್ನಾಳ್ ಗೆದ್ದಿದ್ದು, ಹಾಗಾಗಿ ಅದೊಂದು ಗೆಲುವಲ್ಲ. ಯತ್ನಾಳ್ ಅವರು ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಕಿಡಿ ಕಾರಿದರು.
ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಕುರುಡುಮಲೆ ದೇಗುಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಇದ್ದು ಒಳಗೆ ಚೂರಿ ಹಾಕುವವರಿದ್ದಾರೆ. ಬಿಜೆಪಿ ಶಾಲು ಹಾಕೊಂಡು ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡುತ್ತಾರೆ. ಯಾರೇ ಮಾತನಾಡಿದರು ಅವರದ್ದು ಹೊರಗೆ ತೆಗೆಯುತ್ತೇನೆ ಅಂತಾರೆ. ತಾಕತ್ತಿದ್ದರೆ ಅದೇನು ಗೊತ್ತು ತೆಗೆಯಿರಿ. ಹುಚ್ಚರಂತೆ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಹೈಕಮಾಂಡ್ ಸುಮ್ಮನೆ ಇರಲ್ಲ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಬೈ ಎಲೆಕ್ಷನ್ ಸೋಲಿಗೆ ವಿಜಯೇಂದ್ರ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ಬೈ ಎಲೆಕ್ಷನ್ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಗ್ಯಾರಂಟಿ ಕಾರಣ. ಗಣಲಕ್ಷ್ಮಿ ಯೋಜನೆಯ ಹಣ ಹಾಕಿ ಉಪಚುನಾವಣೆಯಲ್ಲಿ ಗೆದ್ದರು ಎಂದು ಕುರುಡುಮಲೆ ದೇಗುಲದಲ್ಲಿ ಮಾಜಿ ಶಾಸಕ ಬಿಸಿ ಪಾಟೀಲ್ ತಿಳಿಸಿದರು.