ನವದೆಹಲಿ : ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಇದೀಗ ಕೇಂದ್ರಕ್ಕೂ ತಲುಪಿದ್ದು, ಎರಡು ದಿನಗಳ ಹಿಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು ರಾಜ್ಯಾಧ್ಯಕ್ಷರ ನಾಯಕತ್ವದ ವಿರುದ್ಧ ಹಿನ್ನೆಲೆಯಲ್ಲಿ ನೋಟಿಸ್ ನೀಡಿತ್ತು. ಈ ಒಂದು ನೋಟಿಸ್ ವಿಚಾರವಾಗಿ ಇಂದು ಯತ್ನಾಳ್ ಕೇಂದ್ರದ ಶಿಸ್ತು ಸಮಿತಿಯ ಎದುರು ಹಾಜರಾಗಿ ನೋಟಿಸ್ ಗೆ ಉತ್ತರಿಸಲಿದ್ದಾರೆ.
ಹಾಗಾಗಿ ಇದೀಗ ಯತ್ನಾಳ್ ಅವರಿಗೆ ನೀಡಿರುವ ಶೋಕಾಸ್ ನೋಟಿಸ್ ಗೆ ಅವರು ಉತ್ತರ ನೀಡಲಿದ್ದಾರೆ. ದೆಹಲಿಯಲ್ಲಿ ಓಂ ಪಾಟಕ್ ಅವರನ್ನು ಯತ್ನಾಳ ಭೇಟಿಯಾಗಲಿದ್ದಾರೆ. ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷರಾಗಿರುವ ಓಂ ಪಾಟಕ್ ಅವರನ್ನು ಭೇಟಿಯಾಗಲಿದ್ದಾರೆ.ಕೆಲವೇ ಕ್ಷಣಗಳಲ್ಲಿ ಶಿಸ್ತು ಸಮಿತಿ ಎದುರು ಯತ್ನಾಳ್ ಹಾಜರಾಗಲಿದ್ದು ನೋಟಿಸ್ ಗೆ ಉತ್ತರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ವಕ್ಫ್ ವಿರುದ್ಧ ನಾನು ಹೋರಾಟ ಮಾಡಿದ್ದೇನೆ. ಪಕ್ಷದ ಅಧ್ಯಕ್ಷರು ಹೋರಾಟಕ್ಕೆ ಮುಂದಾಗಿಲ್ಲ. ವಂಶ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಕೆಲವರನ್ನು ಕಟ್ಟಿಕೊಂಡು ಪಕ್ಷ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಬೈ ಎಲೆಕ್ಷನ್ ಅಲ್ಲಿ ಸೋತಿದ್ದೇವೆ. ಹಿಂದುತ್ವ ಸಮರ್ಥಿಸಿ ಕೊಂಡಿದ್ದೇವೆ ಇದು ಪಕ್ಷದ ವಿರೋಧಿಯೇ? ನನ್ನ ಫ್ಯಾಕ್ಟರಿ ಬಂದ್ ಮಾಡಿಸಿದರು ಹೋರಾಟ ಮುಂದುವರಿಸಿದ್ದೇನೆ ಎಂದು ಯತ್ನಾಳ್ ತಿಳಿಸಿದ್ದಾರೆ.