ಬೆಂಗಳೂರು : ಇಡಿ ಪ್ರಕರಣದಲ್ಲಿ ಜಾಮೀನು ಕೋರಿ ಶಾಸಕ ಸತೀಶ್ ಸೈಲ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಇಂದು ಅರ್ಜಿ ವಿಚಾರಣೆ ನಡೆಸಿ ಫೆಬ್ರವರಿ ಐದರವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿ ಆದೇಶ ಹೊರಡಿಸಿತು.
ಜನವರಿ 21 ರಂದು ವೈದ್ಯಕೀಯ ತಪಾಸಣೆಗಾಗಿ ದಾಖಲಾಗಲು ಹೇನ್ಸ್ ಆಸ್ಪತ್ರೆ ಸೂಚಿಸಿದೆ ಎಂದು ಹೈಕೋರ್ಟಿಗೆ ಸತೀಶ್ ಸೈಲ್ ಪರ ವಕೀಲರು ಮಾಹಿತಿ ನೀಡಿದರು. ಈ ವೇಳೆ ಜಾಮೀನಿನ ಬಗ್ಗೆ ತೀರ್ಮಾನಿಸಲಾಗುತ್ತದೆ. ಆಸ್ಪತ್ರೆಯಲ್ಲಿರುವ ಅಗತ್ಯವಿದೆಯೆ ಅಥವಾ ಕಷ್ಟಡಿಯಲ್ಲಿ ಚಿಕಿತ್ಸೆ ನೀಡಬಹುದೇ ಎನ್ನುವುದರ ಕುರಿತು ವರದಿ ನೀಡಲು ಏಮ್ಸ್ ವೈದ್ಯರಿಗೆ ಹೈಕೋರ್ಟ್ ಇದೆ ವೇಳೆ ಸೂಚನೆ ನೀಡಿತು.








