ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲವು ತಿಂಗಳು ಹಿಂದೆ ಸರಣಿ ಬಾಣಂತಿಯರ ಸಾವುಗಳು ನಡೆದಿತ್ತು. ಇದೀಗ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಡೆತ್ ಎಡಿಟ್ ವರದಿ ಬಿಡುಗಡೆಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ವರದಿಯ ಕುರಿತು ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಬಾಣಂತಿಯರ ಸಾವಿನ ಬಗ್ಗೆ ಟೆಕ್ನಿಕಲ್ ಕಮಿಟಿ ರಚನೆ ಮಾಡಲಾಗಿತ್ತು. ಟೆಕ್ನಿಕಲ್ ಕಮಿಟಿ ವರದಿಯ ಶಿಫಾರಸು ಸರ್ಕಾರ ಪಡೆದಿದೆ. ಅಗತ್ಯ ಔಷದ ಸಲಕರಣೆ ವೈದ್ಯರು ಜವಾಬ್ದಾರಿ ನಿರ್ವಹಿಸಿದ್ದಾರೆ 70 ಪರ್ಸೆಂಟ್ ಬಾಣಂತಿಯರ ಸಾವುಗಳನ್ನು ನಾವು ತಡೆಯಬಹುದಿತ್ತು.
ರಿಂಗರ್ ಲ್ಯಾಕ್ಟೆಕ್ ಸಮಸ್ಯೆಯಿಂದ 18 ಬಾಣಂತಿಯರ ಸಾವಾಗಿದೆ. ಡಿಸೆಂಬರ್ ನಿಂದ ಇದನ್ನು ಸರಿಪಡಿಸಲು ತಯಾರಿ ಮಾಡಿದ್ದೇವೆ ಫ್ರೆಶ್ ಫ್ರೋಜನ್ ಪ್ಲಾಸ್ಮಾ ಇದ್ದಿದ್ದರೆ ಸಾವಿನ ಸಂಖ್ಯೆ ತಡೆಯಬಹುದಿತ್ತು. ಮೊದಲೇ ರಿಸ್ಕ್ ಪ್ರಮಾಣ ಗೊತ್ತಿದ್ದರೆ ಹೆಚ್ಚಿನ ಚಿಕಿತ್ಸೆ ನೀಡಬಹುದಾಗಿತ್ತು. ಬಹಳ ಸುಧಾರಣೆ ಮಾಡುವ ಅವಶ್ಯಕತೆ ಇದೆ ಎಂದು ವರದಿಯಲ್ಲಿ ಗೊತ್ತಾಗಿದೆ ಎಂದುರು.
ಬಳ್ಳಾರಿಯಲಿ ಐದು ಸಾವು ಆಗಿರುವಂತೆ 13 ಕಡೆಗಳಲ್ಲೂ ಹೀಗೆ ಆಗಿದೆ. 13 ಕಡೆಗಳಲ್ಲೂ ಅದೇ ರೀತಿ ಆಗಿದೆ ಎಂಬ ಅನುಮಾನ ಇದೆ. ಹಾಗಾಗಿ ಈ ಕುರಿತು ಈಗಾಗಲೇ 10 ವೈದ್ಯರಿಗೆ ನಿರ್ಲಕ್ಷದ ಕಾರಣಕ್ಕೆ ನೋಟಿಸ್ ನೀಡಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.