ಬೆಂಗಳೂರು : ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಇದೀಗ ಪ್ರಯಾಣಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಇದ್ದಾಗಲೇ ಮೆಟ್ರೋ ಟಿಕೆಟ್ ದರ ಏರಿಕೆ ಆಗುತ್ತದೆ.ರಾಜ್ಯ ಮತ್ತು ಕೇಂದ್ರ ಸರ್ಕಾರ ಇಬ್ಬರೂ ಸೇರಿ ನಾಟಕ ಮಾಡುತ್ತಿದ್ದಾರೆ ಎಂದು ಇದೀಗ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ಯಾವುದೇ ರಾಜ್ಯದಲ್ಲೂ ಇಷ್ಟೊಂದು ಪ್ರಯಾಣದ ದರ ಇಲ್ಲ. ಇಬ್ಬರು ಸೇರಿ ದರ ಏರಿಕೆ ಮಾಡಿ ಇದೀಗ ನಾಟಕ ಮಾಡುತ್ತಿದ್ದಾರೆ. ಎರಡು ಸರಕಾರಗಳು ಸೇರಿ ನಾಟಕ ಮಾಡುತ್ತಿವೆ, ದರ ಏರಿಕೆಗೆ ಎರಡು ಸರ್ಕಾರಗಳ ಅನುಮತಿ ಬೇಕು ಮೆಟ್ರೋ ದರ ಏರಿಕೆ ಗ್ಯಾರಂಟಿಗಳ ಕೊಡುಗೆ. ದರ ಏರಿಕೆ ಬಳಿಕ ಶೇಕಡ 30 ರಿಂದ 40 ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು ಶೇಕಡ 100ರಷ್ಟು ಪ್ರಯಾಣದ ದರ ಏರಿಕೆ ಮಾಡಿದ್ದು ಇದರಿಂದ ಪ್ರಯಾಣಿಕರಿಗೆ ತುಂಬಾ ಕಷ್ಟ ಆಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಸಡನ್ನಾಗಿ ಒಮ್ಮೆ ಇಷ್ಟೊಂದು ಪ್ರಮಾಣದಲ್ಲಿ ದರ ಏರಿಕೆ ಮಾಡಿದರೆ ಪ್ರಯಾಣಿಕರಿಗೆ ತುಂಬಾ ಕಷ್ಟ ಆಗುತ್ತದೆ. ಐದೋ ಅಥವಾ ಹತ್ತು ರೂಪಾಯಿಗಳನ್ನು ಏರಿಕೆ ಮಾಡಿದರೆ ಸಮಸ್ಯೆ ಇಲ್ಲ ಆದರೆ ಇಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿದ್ದು ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾಗುತ್ತದೆ ಕೂಡಲೇ ಸರ್ಕಾರ ಈ ಕುರಿತು ಚರ್ಚಿಸಿ ಟಿಕೆಟ್ ದರವನ್ನು ಇಳಿಸಬೇಕು ಎಂದು ಪ್ರಯಾಣಿಕರು ಅಗ್ರಹಿಸಿದ್ದಾರೆ.