ಮೈಸೂರು : ಎಲೆಕ್ಟ್ರಿಕ್ ಕ್ಲಿಯರೆನ್ಸ್ ಗಾಗಿ ಮರಗಳನ್ನು ಕತ್ತರಿಸಿದ ಮೆಸ್ಕಾಂ ನಡೆಗೆ ಈಶ್ವರ ವನ ಟ್ರಸ್ಟ್ ಆಕ್ರೋಶಗೊಂಡಿದ್ದು, ಈ ಕುರಿತಂತೆ ಅರಣ್ಯ ಇಲಾಖೆಗೆ ಮೆಸ್ಕಾಂ ವಿರುದ್ಧ ಈಶ್ವರ ವನ ಟ್ರಸ್ಟ್ ದೂರು ನೀಡಿದೆ. ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಶ್ವರ ವನ ಟ್ರಸ್ಟ್ ದೂರು ನೀಡಿದೆ.
ಎರಡು ಎಕರೆ ಪ್ರದೇಶದಲ್ಲಿ ಈಶ್ವರವನ ಟ್ರಸ್ಟ್ ಮರಗಳನ್ನು ಬೆಳೆಸಿತ್ತು. ಅಳಿವಿನಂಚಿನಲ್ಲಿ ಇರುವಂತಹ ಗಿಡಗಳನ್ನು ನೆಟ್ಟು ಟ್ರಸ್ಟ್ ಅವುಗಳನ್ನು ಪೋಷಣೆ ಮಾಡಿತ್ತು. ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಈಶ್ವರನ ಟ್ರಸ್ಟ್ ಬೆಳೆಸಿತ್ತು. ಪ್ರಾಣಿ ಪಕ್ಷಿಗಳಿಗೆ ಆಹಾರವಾಗಿರುವ ಹಣ್ಣಿನ ಗಿಡಗಳನ್ನು ಇದೀಗ ನಾಶ ಮಾಡಲಾಗಿದೆ.
ಎಲೆಕ್ಟ್ರಿಕ್ ಲೈನ್ ಕ್ಲಿಯರೆನ್ಸ್ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆದಿದೆ. ಮೆಸ್ಕಾಂ ಸಿಬ್ಬಂದಿ ಅಕ್ರಮವಾಗಿ ಪ್ರವೇಶಿಸಿ ಮರಗಳನ್ನು ಕಡಿದಿದ್ದಾರೆ. ಇದೀಗ ಮೆಸ್ಕಾಂ ಸಿಬ್ಬಂದಿ ವಿರುದ್ಧ ಪರಿಸರ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಮೆಸ್ಕಾಂ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದೆ.