ಬೆಳಗಾವಿ : ಬೆಳಗಾವಿಯಲ್ಲಿ ಎಂಇಎಸ್ ಭವನ ನಿರ್ಮಿಸುತ್ತಿರುವ ವಿಚಾರವಾಗಿ ಇಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ನಾವು ದೆಹಲಿಗೆ ಹೋಗಿ ಭವನ ಕಟ್ಟಿದ್ದೇವೆ. ಆಸ್ತಿ ಸಂಪಾದನೆ,ತಿರುಗಾಡಲು ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶ ಇದೆ. ಹಾಗಂತ ನಮ್ಮ ಜಾಗವನ್ನು ಆಕ್ರಮಿಸಲು ಬರುವುದಿಲ್ಲ. ನಾವು ಬೆಳಗಾವಿಯನ್ನು ಯಾವ ಕಾರಣಕ್ಕೂ ಬಿಟ್ಟುಕೊಡಲ್ಲ ಎಂದು ಬೆಳಗಾವಿ ಏರ್ಪೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಅವಧಿಯಲ್ಲಿ ಕರ್ನಾಟಕ ಆರ್ಥಿಕ ಸ್ಥಿತಿ ಹಾಳಾಗಿದ್ದು, ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಇದ್ದಾಗಲೇ ಎಲ್ಲಾ ಹಾಳಾಗಿದ್ದು, ರಾಜ್ಯದಲ್ಲಿ 4.9 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದೇವೆ. ಈ ವರ್ಷ 38 ಸಾವಿರ ಕೋಟಿ ರೂಪಾಯಿ ಬಜೆಟ್ ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳಿದ್ದರು. ಆರ್ಥಿಕವಾಗಿ ದಿವಾಳಿ ಆಗಿದ್ದರೆ ಇದು ಸಾಧ್ಯ ಆಗುತ್ತಿತ್ತ,? ಮೋದಿ ಅಧಿಕಾರಕ್ಕೆ ಬಂದಾಗ 53.11 ಲಕ್ಷ ಕೋಟಿ ಸಾಲ ಇತ್ತು. 10 ವರ್ಷದಲ್ಲಿ ದೇಶದಲ್ಲಿ 200 ಲಕ್ಷ ಕೋಟಿ ಸಾಲ ಆಗಿದೆ. ದೇಶದ ಮೇಲೆ ಸಾಲ ಜಾಸ್ತಿ ಆಗಲು ಕಾರಣ ನರೇಂದ್ರ ಮೋದಿ ಎಂದು ಬೆಳಗಾವಿ ಏರ್ಪೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
CM ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಮುನ್ನೆಲೆಗೆ ಬಂದಿದೆ ಎಂದು ಬಿಜೆಪಿ ನಾಯಕರು ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಜಾತಿ ಗಣತಿ ಆಗಬೇಕು ಅಂತ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಆರ್ಥಿಕವಾಗಿ ಸಾಮಾಜಿಕವಾಗಿ ಏನಾಗಿದೆ ಗೊತ್ತಾಗಬೇಕು ಅಲ್ವಾ? 1931 ರಲ್ಲಿ ಜಾತಿಗಣತಿ ನಡೆದಿತ್ತು. ಸ್ವಾತಂತ್ರ್ಯ ಬಂದ ಮೇಲೆ ಆಗಲಿಲ್ಲ. ಶೇಕಡಾ 95 ರಷ್ಟು ಸರ್ವೆ ಆಗಿದೆ ಯಾವಾಗಲೂ 100% ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.