ಹಾಸನ : ಹಾಸನ ನಗರದಲ್ಲಿ ಎಮ್ ಡಿಎಂಎ ಡ್ರಗ್ಸ್ ಮಾರಾಟ ಜಾಲ ಪತ್ತೆಯಾಗಿದ್ದು, ಕಾರಿನಲ್ಲಿ ಡ್ರಗ್ ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಸನದ ರಾಜಕುಮಾರ ನಗರದ ಚೆಕ್ ಪೋಸ್ಟ್ ಬಳಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ನಾಲ್ವರು ಹಾಗೂ ಹಾಸನದ ಓರ್ವ ಆರೋಪಿಯ ಬಂಧನವಾಗಿದೆ. ಪರ್ವೀಜ್ (29)ಸುಹೇಲ್ (24) ಅಬ್ದುಲ್ ಯಾಸಿನ್ (20) ಇಬ್ರತ್ ಖಾನ್ (24) ಸಯ್ಯದ್ ಯೂಸುಫ್ (23) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಕಾರಿನಲ್ಲಿ ಇದ್ದ 2 ಲಕ್ಷಕ್ಕೂ ಅಧಿಕ ಮೌಲ್ಯದ 40 ಗ್ರಾಂ MDMA ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರು ತಪಾಸಣೆಯ ವೇಳೆ ಐವರು ಆರೋಪಿಗಳು ಸಿಗಿ ಬಿದ್ದಿದ್ದಾರೆ.








