ಮಂಡ್ಯ : ನಿನ್ನೆ ಸಂಜೆ 7 ಗಂಟೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಮನೆಗೆ ನುಗ್ಗಿ ಮರ ಕತ್ತರಿಸುವ ಯಂತ್ರದಿಂದ ವೃದ್ಧ ರಮೇಶ್ ಎನ್ನುವ ವ್ಯಕ್ತಿಯನ್ನು ಮಹಮ್ಮದ್ ಇಬ್ರಾಹಿಂ ಎನ್ನುವ ವ್ಯಕ್ತಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಈಗ ಪೊಲೀಸರು ಆರೋಪಿ ಮೊಹಮ್ಮದ್ ಇಬ್ರಾಹಿಂ ವಶಕ್ಕೆ ಪಡೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ವೇಳೆ ಕೊಲೆ ಆರೋಪಿ ಮೊಹಮ್ಮದ್ ಇಬ್ರಾಹಿಂ ಕೊಲೆಗೆ ಕಾರಣ ತಿಳಿಸಿದ್ದು, ಈ ಕುರಿತು ಪೊಲೀಸರೇ ಶಾಕ್ ಆಗಿದ್ದಾರೆ. ಕೊಲೆ ಆರೋಪಿ ಮೊಹಮ್ಮದ್ ಇಬ್ರಾಹಿಂ ಮೂಲತಃ ಶ್ರೀರಂಗಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ. 27 ವರ್ಷದ ಈತ ಆನ್ಲೈನ್ನಲ್ಲಿ ಗೇಮ್ ಆಡುವ ಚಟ ಹೊಂದಿದ್ದ ಹೀಗಾಗಿ, ಮಹಮದ್ ಇಬ್ರಾಹಿಂ ಸಿಕ್ಕಾಪಟ್ಟೆ ಸಾಲ ಮೈಮೇಲೆ ಎಳೆದುಕೊಂಡಿದ್ದ.
ಹೇಗಾದರೂ ಮಾಡಿ ಸಾಲ ತೀರಿಸಬೇಕು ಎಂದು ಒಂಟಿ ಮನೆ ಇರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಅಲ್ಲಿ ಹೋಗಿ ಕಳ್ಳತನ ಮಾಡುವ ಪ್ಲಾನ್ ಹಾಕಿದ್ದ. ಅದೇ ರೀತಿಯಾಗಿ ಈ ಒಂದು ಕೊಲೆ ಮಾಡೋಕು ಮುಂಚೆ ಕೆನ್ನಾಳು ಗ್ರಾಮಕ್ಕೆ ತೆರಳಿದ್ದಾನೆ. ಅಲ್ಲಿ ಇಂದ್ರಮ್ಮ ಎನ್ನುವ ಅವರ ಮನೆಗೆ ಹೋಗಿ ಮರ ಕೊರೆಯುವ ಯಂತ್ರ ಬಂದಿದೆ ಎಂದು ತೋರಿಸಿದ್ದಾಗ ಅವರು ನನಗೆ ಯಾವುದೇ ಮಂತ್ರ ಬೇಡ ಎಂದು ಆತನನ್ನು ಕಳುಹಿಸಿದ್ದಾರೆ.
ಕೆನ್ನಾಳು ಗ್ರಾಮದ ಇಂದ್ರಮ್ಮ ಮನೆಗೆ ಇದೆ ಕೊಲೆ ಆರೋಪಿ ಬಂದಿದ್ದಾನೆ. ಈ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದು, ಆ ಮಾರುತಿ ನನ್ನ ಜೀವ ಕಾಪಾಡಿದ್ದಾನೆ. ದೇವರಿಗೆ ಪೂಜೆ ಮಾಡಲು ನಾನು ತಯಾರಿ ಮಾಡಿಕೊಳ್ಳುತ್ತಿದ್ದೆ ಇವೇಳಿ ಆತ ಬಂದು ಮನೆಯ ಬಾಗಿಲು ಪಡೆದಿದ್ದ ಮರ ಕತ್ತರಿಸುವ ಯಂತ್ರ ಬಂದಿದೆ ಎಂದು ಹೇಳಿದ್ದ. ನಾನು ಯಾವುದೇ ಯಂತ್ರ ಬೇಡ ಎಂದು ಆತನನ್ನು ವಾಪಸ್ ಕಳುಹಿಸಿದ್ದೆ ಎಂದು ಇಂದ್ರಮ್ಮ ತಿಳಿಸಿದ್ದಾರೆ.
ನನ್ನ ಗಂಡನನ್ನು ಪೀಸ್ ಪೀಸ್ ಮಾಡಿದ
ಇನ್ನು ತನ್ನ ಗಂಡನನ್ನು ಕಣ್ಣೆದುರಲ್ಲೇ ಸಾಯಿಸಿದ ರಮೇಶ್ ಅವರ ಪತ್ನಿ ಯಶೋಧ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಗಂಡನನ್ನು ಪೀಸ್ ಪೀಸ್ ಮಾಡಿಬಿಟ್ಟ. ಬಾಗಿಲ ಬಳಿ ಬಂದು ಮಂತ್ರ ಕೊರೆಯುವ ಮಷೀನ್ ಆನ್ ಮಾಡುತ್ತಾನೆ. ಶಬ್ದ ಕೇಳಿ ನಾನು ಬಾಗಿಲು ಓಪನ್ ಮಾಡಿದೆ. ಇದನ್ನು ನೀವು ಆರ್ಡರ್ ಮಾಡಿದ್ದೀರಿ ಎಂದು ಹೇಳುತ್ತಾನೆ. ಇಲ್ಲ ನಾವು ಯಾವುದೇ ಮಷೀನ್ ಆರ್ಡರ್ ಮಾಡಿಲ್ಲ ಎಂದಾಗ, ಸೀದಾ ಮನೆಗೆ ನುಗ್ಗಿದ್ದಾನೆ ಕೂತಿದ್ದ ಪತಿಯನ್ನು ಕಣ್ಣೆದುರಿಗೆ ಪೀಸ್ ಪೀಸ್ ಮಾಡಿದ್ದಾನೆ. ಮಷೀನ್ ಬಳಸಿಕೊಂಡು ಕತ್ತರಿಸಿ ಹಾಕಿದ. ನಾನು ಉಸಿರು ಕಟ್ಟಿ ಸತ್ತಂತೆ ನಟಿಸಿದೆ. ಆಮೇಲೆ ಆತನನ್ನು ಮನೆ ಒಳಗೆ ಕೂಡಿಹಾಕಿ ಅಕ್ಕಪಕ್ಕದ ಜನರನ್ನು ಕೂಗಿ ಕರೆದಿದ್ದೇನೆ ಎಂದು ಯಶೋಧಮ್ಮ ತಿಳಿಸಿದ್ದಾರೆ.