ಹಾಸನ : ಮದ್ಯದ ಅಮಲಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿ ಒಬ್ಬರು ಚರಂಡಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮನೆಗೆ ತೆರಳುವಾಗ ಚರಂಡಿಗೆ ಬಿದ್ದು ಓಂಕಾರ (40) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಂಪೂರ್ಣ ಕೊಳಚೆಯಿಂದ ತುಂಬಿದ್ದ ಚರಂಡಿಗೆ ಬಿದ್ದು ಓಂಕಾರ್ ಸಾವನ್ನಪ್ಪಿದ್ದಾರೆ. ಚರಂಡಿಯನ್ನು ಸ್ವಚ್ಛ ಮಾಡದ ಗ್ರಾಮ ಪಂಚಾಯತಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅ ಘಟನೆ ಕುರಿತಂತೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.