ಯಾದಗಿರಿ : ಅಂತರ್ಜಾತಿ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಗ್ರಾಮದ ಸಂಗೀತ ಹಾಗೂ ನಿಂಗಪ್ಪ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸಂಗೀತಾ ಸಹವಾಸ ಬಿಡುವಂತೆ ನಿಂಗಪ್ಪಗೆ ಸಂಗೀತಾ ಕುಟುಂಬಸ್ಥರು ತಾಕಿತು ಮಾಡಿದ್ದರು.ಆನಂತರ ಸಂಗೀತಾಳೊಂದಿಗೆ ನಿಂಗಪ್ಪ ಅಂತರ ಕಾಯ್ದುಕೊಂಡಿದ್ದ. ಆದರೆ ನಿಂಗಪ್ಪನೊಂದಿಗೆ ಸಂಗೀತ ಓಡಿ ಹೋಗಿದ್ದಳು. ಒಂದು ತಿಂಗಳ ಹಿಂದೆ ಓಡಿ ಹೋಗಿ ಇಬ್ಬರು ಗುಜರಾತ್ ನಲ್ಲಿ ವಾಸವಿದ್ದರು.
ಬಳಿಕ ನ್ಯಾಯ ಪಂಚಾಯಿತಿ ಮಾಡಿದ ನಂತರ ಆಕೆಯನ್ನು ಮನೆಗೆ ಕಳುಹಿಸಲಾಗಿತ್ತು. ನಂತರ ಕೂಲಿ ಕೆಲಸಕ್ಕಾಗಿ ಯುವಕ ನಿಂಗಪ್ಪ ಚಿತ್ತಾಪುರಕ್ಕೆ ತೆರಳಿದ್ದಾನೆ. ಈ ವೇಳೆ ಸಂಗೀತ ನಿಂಗಪ್ಪನಿಗೆ ಕರೆ ಮಾಡಿ ಮತ್ತೆ ಪರಾರಿಯಾಗಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸಂಗೀತ ಕುಟುಂಬಸ್ಥರು ಯುವಕ ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ.
ನಿಂಗಪ್ಪನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಹಲ್ಲೆ ಗೈದ ಯುವತಿಯ ಕುಟುಂಬಸ್ಥರ ವಿರುದ್ಧ ಹಲ್ಲೆ ಮತ್ತು ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.