ಬೆಂಗಳೂರು : ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪತಿಯೊಬ್ಬ ತನ್ನ ಪತ್ನಿ ಹಾಗು ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಪತ್ನಿ ಮಾವನಿಗೆ ಖಾರದಪುಡಿ ಎರಚಿ ಸಾಯಿ ಕುಮಾರ್ ಹಲ್ಲೆ ನಡೆಸಿದ್ದಾನೆ. ವರದಕ್ಷಿಣೆ ವಿಚಾರಕ್ಕೆ ಮನೆಯಲ್ಲಿ ಪತಿ ಮತ್ತು ಪತ್ನಿಯ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇದೆ ವೇಳೆ ಮಾವನ ಜೊತೆಗೂ ಸಾಯಿ ಕುಮಾರ್ ಜಗಳ ಮಾಡಿದ್ದಾನೆ. ಈ ವೇಳೆ ಖಾರದ ಪುಡಿ ಎರಚಿ ಪತ್ನಿ ಮತ್ತು ಮಾವನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಸದ್ಯ ಪತಿ ವಿರುದ್ಧ ಪತ್ನಿ ರಮ್ಯಾ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.