ಮಹಾರಾಷ್ಟ್ರ : ಇಂದು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಈಗಾಗಲೇ ಮಹಾಯುತಿಯು 160 ಸ್ಥಾನಗಳ ಮುನ್ನಡೆ ಸಾಧಿಸುವುದರೊಂದಿಗೆ ಮ್ಯಾಜಿಕ್ ನಂಬರ್ ಅನ್ನು ದಾಟಿದೆ. ಇನ್ನು ಮಹಾವಿಕಾಸ್ ಅಘಾಡಿಯು 105 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೇ ಪಕ್ಷೇತರ ಅಭ್ಯರ್ಥಿಗಳು 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಬಹುತೇಕ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎನ್ನಲಾಗಿದೆ.
ಮ್ಯಾಜಿಕ್ ನಂಬರ್ ದಾಟಿದ ಮಹಾಯುತಿಯು ಸರ್ಕಾರ ರಚನೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದು ಈ ಹಿನ್ನೆಲೆಯಲ್ಲಿ 2022ರಲ್ಲಿ ಮಹಾರಾಷ್ಟ್ರದ ರಾಜಕೀಯದಲ್ಲಿ ಏಕನಾಥ್ ಶಿಂಧೆ ದೊಡ್ಡ ಬದಲಾವಣೆಯನ್ನು ತಂದವರು. ತಮ್ಮ ನಾಯಕರಾದ ಉದ್ಧವ್ ಠಾಕ್ರೆ ವಿರುದ್ಧವೇ ತಿರುಗಿಬಿದ್ದ ಶಿಂಧೆ ಶಕ್ತಿಶಾಲಿ ಬಣವನ್ನು ತಯಾರಿಸಿ ಶಿವಸೇನೆಗೆ ದೊಡ್ಡ ಅಘಾತವನ್ನು ಕೊಟ್ಟಿದ್ದರು. ಈ ಮೂಲಕ ಮಹಾರಾಷ್ಟ್ರದಲ್ಲಿ ರಾಜಕೀಯ ಸಮೀಕರಣಗಳನ್ನೇ ಬುಡಮೇಲು ಮಾಡಿ, ತಮ್ಮ ಪ್ರಭಾವವನ್ನು ಬೆಳೆಸಿಕೊಂಡಿದ್ದರು.
ಹಾಗಾಗಿ ಬಿಜೆಪಿಯು ತನ್ನದೇ ಆದ ನಾಯಕನನ್ನು ಮುಖ್ಯಮಂತ್ರಿಯಾಗಿ ನೇಮಿಸುವ ಸಾಧ್ಯತೆಯಿದೆ. ಅಂದರೆ ಅವರು ಶಿಂಧೆ ಬಣವನ್ನು ಬಳಸಿಕೊಂಡು ಸ್ವತಂತ್ರವಾಗಿ ಸರ್ಕಾರ ಸ್ಥಾಪನೆಗೆ ಪ್ರಯತ್ನಿಸಬಹುದು. ಹಾಗಾಗಿ ಮಹಾರಾಷ್ಟ್ರದಲ್ಲಿ ಯಾವ ರೀತಿ ಸರ್ಕಾರ ರಚನೆಯಾಗುತ್ತದೆ ಎನ್ನುವುದು ಇದೀಗ ತೀವ್ರ ಕುತೂಹಲ ಮೂಡಿಸಿದೆ.