ಬೆಂಗಳೂರು : ಸಾಮಾನ್ಯವಾಗಿ ಬೈಕ್ ಅಥವಾ ಕಾರು ಯಾವುದೇ ಇರಲಿ ನಂಬರ್ ಪ್ಲೇಟ್ ಮೇಲೆ ನಂಬರ್ ಇರುವುದನ್ನು ನೋಡಿದ್ದೇವೆ. ಅಲ್ಲದೆ ನಂಬರ್ ಜೊತೆ ಕೆಲವು ಅಡಿ ಬರಹಗಳನ್ನು ಸಹ ಕಾಣುತ್ತೆವೆ. ಕೇಂದ್ರ ಮೋಟಾರ್ ವಾಹನ ನಿಯಮದ ಪ್ರಕಾರ ವಾಹನದ ಹಿಂದೆ ಮತ್ತು ಮುಂದೆ ನಂಬರ್ ಪ್ಲೇಟ್ ಮೇಲೆ ನಂಬರ್ ಕಡ್ಡಾಯ.ಆದರೆ ಬೆಂಗಳೂರಿನಲ್ಲಿ ಕಾರು ಒಂದು ನಂಬರ್ ಪ್ಲೇಟ್ ಮೇಲೆ ನಂಬರ್ ಬದಲಾಗಿ ಮಾಫಿಯಾ ಎಂದು ಸ್ಟಿಕರ್ ಅಳವಡಿಸಿ ಓಡಾಡುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.
ಹೌದು ಕಾರಿನ ನಂಬರ್ ಪ್ಲೇಟ್ ನಲ್ಲಿ ಮಾಫಿಯಾ ಪ್ರತ್ಯಕ್ಷವಾಗಿದೆ. ಬೆಂಗಳೂರಿನಲ್ಲಿ ಓಡಾಡುತ್ತಿದೆ ಮಾಫಿಯಾ ಎಂದು ಬರೆದ ಕಾರು. ನಂಬರ್ ಪ್ಲೇಟ್ ನಲ್ಲಿ ಮಾಫಿಯಾ ಎಂದು ಬರೆಸಿ ಉದ್ಧಟತನ ಮೆರೆಯಲಾಗಿದೆ. ಕಾರಿನ ನಂಬರ್ ಪ್ಲೇಟ್ ಮೇಲೆ ನಂಬರ್ ಬದಲಿಗೆ ಮಾಫಿಯಾ ಎಂಬ ಬರಹ ಬರೆಯಲಾಗಿದೆ.ಮಾಫಿಯಾ ಎಂದು ಬರೆದು ಏರ್ಪೋರ್ಟರ್ ರಸ್ತೆಯಲ್ಲಿ ಕಾರು ಸಂಚರಿಸಿದೆ. ಸಾರ್ವಜನಿಕರೊಬ್ಬರು ಈ ಒಂದು ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.