ಚಿಕ್ಕಮಗಳೂರು : ಯುವಕನೊಬ್ಬ ಮೊದಲನೇ ಪತ್ನಿಗೆ ಡಿವೋರ್ಸ್ ಕೊಟ್ಟು ಮತ್ತೊಬ್ಬ ಯುವತಿಯನ್ನು ಪ್ರೀತಿಸಿ 5 ಲಕ್ಷ ಹಣ ಪಡೆದು ಕೈ ಕೊಟ್ಟು ಇದೀಗ ಬೇರೆ ಯುವತಿಯ ಜೊತೆಗೆ ಮದುವೆ ಆಗೋಕೆ ರೆಡಿ ಆಗಿದ್ದಾನೆ. ಈ ವೇಳೆ ಮದುವೆ ಮಂಟಪಕ್ಕೆ ನುಗ್ಗಿ ಪ್ರಿಯತಮೆ ಗಲಾಟೆ ಮಾಡಿದ್ದಾಳೆ. ಯುವಕನ ಮದುವೆಯ ವೇಳೆ ಯುವತಿ ರಂಪಾಟ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.
ಚಿಕ್ಕಮಗಳೂರಲ್ಲಿ ಯುವತಿ ಅಶ್ವಿನಿ ರಣಚಂಡಿ ಅವತಾರ ತಾಳಿದ್ದು, ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ಯುವತಿ ಮದುವೆ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಳೆ. ಪ್ರೀತಿಸಿ ಮೋಸ ಮಾಡಿದ್ದಾಗಿ ಶರತ್ ವಿರುದ್ಧ ಅಶ್ವಿನಿ ಆರೋಪ ಮಾಡಿದ್ದಾಳೆ ಶರತ್ ಮತ್ತು ಫ್ಯಾಮಿಲಿ ವಿರುದ್ಧ ಯುವತಿ ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಮನೆಯ ಮುಂದೆ ಇವತ್ತು ನೇರವಾಗಿ ಮದುವೆ ಮಂಟಪಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ.
ಚಿಕ್ಕಮಂಗಳೂರು ನಗರದ ಕಲ್ಯಾಣ ನಗರದ ಯುವಕ ಶರತ್ ಅಶ್ವಿನಿಯನ್ನು ಪ್ರೀತಿ ಮಾಡುತ್ತಿದ್ದನಂತೆ ಆದರೆ ಈಗ ಪ್ರೀತಿಸಿ ಕೈ ಕೊಟ್ಟು ಬೇರೆಯವರೊಂದಿಗೆ ಮದುವೆಯಾಗಲು ಶರತ್ ಮುಂದಾಗಿದ್ದ. ಅಲ್ಲದೇ ಅಶ್ವಿನಿ ಹತ್ತಿರ 5 ಲಕ್ಷ ಹಣ ಕೂಡ ಪಡೆದಿದ್ದ ಎನ್ನಲಾಗಿದೆ. ಹಾಗಾಗಿ ನಿನ್ನೆ ಅಶ್ವಿನಿ ಮನೆ ಮುಂದೆ ಹೋಗಿ ಗಲಾಟೆ ಮಾಡಿದಳು ಇದೀಗ ಇಂದು ಮದುವೆ ಮಂಟಪಕ್ಕೆ ನುಗ್ಗಿ ಅಶ್ವಿನಿ ಗಲಾಟೆ ಮಾಡಿದ್ದಾಳೆ.
ಕಳೆದ ಹತ್ತು ವರ್ಷದಿಂದ ಅಶ್ವಿನಿ ಶರತ್ ನನ್ನ ಪ್ರೀತಿಸುತ್ತಿದ್ದಳು. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಅಶ್ವಿನಿ ಶರತ್ ವಿರುದ್ಧ ಆರೋಪಿಸಿದ್ದಾಳೆ. ಇಂದು ಚಿಕ್ಕಮಂಗಳೂರು ನಗರದಲ್ಲಿ ಶರತ್ ಮದುವೆ ನಡೆಯುತ್ತಿತ್ತು ಮದುವೆ ನಿಲ್ಲಿಸಿ ನನ್ನ ಮದುವೆಯಾಗುವ ಎಂದು ಅಶ್ವಿನಿ ಪಟ್ಟು ಹಿಡಿದಿದ್ದಾಳೆ. ಹಾಸನ ಜಿಲ್ಲೆಯ ಬೇಲೂರು ಮೂಲದ ಅಶ್ವಿನಿ ಹಾಗೂ ಚಿಕ್ಕಮಗಳೂರಿನ ಶರತ್ ಎಂದು ತಿಳಿದು ಬಂದಿದೆ.
ಎಂಟು ತಿಂಗಳ ಹಿಂದೆ ಅಲ್ದುರು ಪೊಲೀಸ್ ಠಾಣೆಗೆ ಅಶ್ವಿನಿ ದೂರು ನೀಡಿದಳು. ನಿನ್ನೆ ಶರತ್ ಮನೆಯ ಮುಂದೆ ಅಶ್ವಿನಿ ಏಕಾಂಗಿ ಹೋರಾಟ ಮಾಡಿದ್ದಾಳೆ ಇಂದು ಮದುವೆ ಮಂಟಪಕ್ಕೆ ಬಂದು 15 ಗಲಾಟೆ ಮಾಡಿದ್ದಾಳೆ ಮದುವೆ ಮಂಟಪದ ಒಳಗೆ ಅಶ್ವಿನಿ ಧರಣಿ ಕುಳಿತಿದ್ದಾಳೆ ಮದುವೆ ಮಂಟಪದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








