ಬೆಂಗಳೂರು : ರಾಜ್ಯ ಸರ್ಕಾರ ಡೀಸೆಲ್ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ, ಇದೀಗ ಲಾರಿ ಚಾಲಕರು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದು ಇಂದು ಮಧ್ಯರಾತ್ರಿ ಇಂದಲೇ ಲಾರಿ ಮುಷ್ಕರ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ, ಕೆಲ ಅಗತ್ಯ ವಸ್ತುಗಳು ಸಿಗೋದು ಬಹುತೇಕ ಡೌಟ್ ಎಂದೇ ಹೇಳಲಾಗುತ್ತಿದೆ.
ಹಾಲು, ಔಷಧ, ಹಣ್ಣು ಮತ್ತು ತರಕಾರಿ, ಸಿಲಿಂಡರ್ ಸಾಗಣೆ ವಾಹನ, ಆಂಬುಲೆನ್ಸ್ ಅಗ್ನಿಶಾಮಕ ಸೇವೆ ವಾಹನಗಳ ಸಂಚಾರ ಇರಲಿದೆ. ಆದರೆ ಶೋರೂಮ್ ಗಳಿಗೆ ವಾಹನಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅಕ್ಕಿ, ಬೇಳೆ, ದಿನಸಿ ಸೇರಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಇನ್ನು ಸಿಮೆಂಟ್, ಮರಳು, ಜಲ್ಲಿಕಲ್ಲು, ಕಟ್ಟಡ ನಿರ್ಮಾಣ ಸಾಮಗ್ರಿಗಳಲ್ಲಿ ಕೊರತೆ ಕಂಡುಬರಲಿದೆ. ಪೆಟ್ರೋಲ್ ಡೀಸೆಲ್ ಸಾಗಣೆ ವಾಹನ ನಿಲುಗಡೆಯಿಂದ ಇವೆಲ್ಲ ಸಮಸ್ಯೆಗಳು ಎದುರಾಗಲಿವೆ. ಎರಡು ಅಥವಾ ಮೂರು ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಲಭ್ಯತೆಯಲ್ಲಿ ಕೂಡ ಕೊರತೆ ಉಂಟಾಗಲಿದೆ. ನೆರೆ ರಾಜ್ಯಗಳಿಂದ ಬರುವ ಲಾರಿ ಮತ್ತು ಟ್ರಕ್ ಗಳಿಗೆ ತಡೆ ಬೀಳುವುದರಿಂದ ಶೋರೂಮ್ಗಳಿಗೆ ವಾಹನಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಲ್ಲದೇ ಮದ್ಯ ಮಾರಾಟ ಮಾ ಮಳಿಗೆಗಳಲ್ಲಿ ದಾಸ್ತಾನುಗಳು ಸಹ ಕೊರತೆಯಾಗುವ ಸಾಧ್ಯತೆ ಇದೆ. ಪಾರ್ಸೆಲ್ ಸೇವೆ ಮೇಲು ನಕರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಲೋಡ್ ಮತ್ತು ಅನ್ಲೊಡ್ ಮಾಡುವ ಕೂಲಿ ಕಾರ್ಮಿಕರಿಗೂ ಕೂಡ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಲಾರಿ ಮುಷ್ಕರದಿಂದ ಹಲವು ಸಮಸ್ಯೆಗಳು ಎದುರಾಗಲಿವೆ. ಇದರಿಂದ ರಾಜ್ಯದ ಜನತೆಗೂ ಕೆಲವು ವಸ್ತುಗಳ ಪೂರೈಕೆಯಲ್ಲಿ ಹೊಡೆತ ಬೀಳಲಿದೆ.