ಮಂಡ್ಯ : ಮಂಡ್ಯದ PWD ಕಚೇರಿಯ AEE ಸತೀಶ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಸತೀಶ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ದೂರು ಬಂದ ಹಿನ್ನೆಲೆ ಮಂಡ್ಯದ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಸತೀಶ್‌ಗೆ ಸೇರಿದ ಮನೆ, ಕಚೇರಿ, ಪತ್ನಿಯ ತವರು ಮನೆಗಳ ಮೇಲೆ ಏಕಾ ಕಾಲದಲ್ಲಿ ದಾಳಿ. ದಾಖಲೆಗಳನ್ನ ಪರಿಶೀಲಿಸುತ್ತಿರುವ ಪೊಲೀಸರು. ಸತೀಶ್ ಮಂಡ್ಯದ PWD ಕಚೇರಿಯ AEE ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸತೀಶ್‌ಗೆ ಸೇರಿದ ಮನೆಗಳು, ಕಚೇರಿ, ಪತ್ನಿಯ ತವರು ಮನೆಗಳ ಮೇಲೆ ಏಕಾ ಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಖಲೆಗಳನ್ನ ಪರಿಶೀಲಿಸುತ್ತಿರುವ ಲೋಕಾಯುಕ್ತ ಪೊಲೀಸರು. ಬಂದೀಗೌಡ ಬಡಾವಣೆಯಲ್ಲಿರುವ ಬಾಡಿಗೆ ಮನೆ, ಮರೀಗೌಡ ಬಡಾವಣೆಯಲ್ಲಿರುವ ತಂದೆ ಮನೆ, ಕಚೇರಿ, ಪತ್ನಿಯ ತವರು ಮನೆ ಮೇಲೆ ದಾಳಿ, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.








