ನವದೆಹಲಿ : ಈ ಬಾರಿ ಲೋಕಸಭಾ ಮಹಾ ಸಮರಕ್ಕೆ ಎಲ್ಲಾ ಪಕ್ಷಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 13ರ ನಂತರ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಆಯೋಗದ ಮೂಲಗಳು ಹೇಳಿವೆ.
ಜಪಾನ್ ಜೊತೆ ವ್ಯಾಪಾರ ಸಂಬಂಧವನ್ನು ಹೆಚ್ಚಿಸಲು ರಾಜ್ಯ ಉತ್ಸುಕವಾಗಿದೆ: ಸಚಿವ ಎಂಬಿ ಪಾಟೀಲ್
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಹೊಸ ಪ್ರಯೋಗ ಒಂದನ್ನು ಮಾಡಿದ್ದು ಚುನಾವಣೆಯಲ್ಲಿ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ಯಾವುದೇ ರೀತಿಯಾದಂತಹ ಅಕ್ರಮಗಳು ನಡೆಯದಂತೆ ತಡೆಯಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಲು ಆಯೋಗ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
BREAKING: ಯುಪಿಯಲ್ಲಿ ‘ಟ್ರ್ಯಾಕ್ಟರ್-ಟ್ರಾಲಿ’ ಹೊಂಡಕ್ಕೆ ಬಿದ್ದು 15 ಮಂದಿ ಸಾವು
ಎಐ ತಂತ್ರಜ್ಞಾನ ಬಳಕೆ
ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿಕೃತಕ ಬುದ್ಧಿಮತ್ತೆ ಬಳಸಲು ಆಯೋಗ ನಿರ್ಧರಿಸಿದ್ದು, ಈ ಸಂಬಂಧ ಪ್ರತ್ಯೇಕ ಘಟಕವನ್ನು ತೆರೆಯಲಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿಮತ್ತು ಡಿಜಿಟಲ್ ಪ್ಲಾಟ್‌ಫಾಮ್‌ರ್‍ಗಳಲ್ಲಿಹರಿದಾಡುವ ಸುಳ್ಳು ಸುದ್ದಿಗಳನ್ನು ಗುರುತಿಸಿ, ತೆಗೆದುಹಾಕುವುದರತ್ತ ಗಮನ ಹರಿಸಲಿದೆ. ಈ ಸಂಬಂಧ ‘ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಮತ್ತು ಎಲೆಕ್ಷನ್ ಮ್ಯಾನೇಜ್‌ಮೆಂಟ್’ ಸಂಸ್ಥೆಯಲ್ಲಿಆಯೋಗದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
BREAKING : ಬೆಂಗಳೂರಲ್ಲಿ ನೀರಿನ ಬರ ನೀಗಿಸಲು ‘131 ಕೋಟಿ’ ಮೀಸಲು : BBMP ಆಯುಕ್ತ ತುಷಾರ್ ಗಿರೀನಾಥ್
ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುಳ್ಳು ಮತ್ತು ಪ್ರಚೋದನಾಕಾರಿ ಅಂಶಗಳನ್ನು ತ್ವರಿತವಾಗಿ ತೆಗೆದು ಹಾಕುವುದು ಈ ಘಟಕದ ಕೆಲಸವಾಗಿದೆ. ಯಾವುದೇ ಪಕ್ಷ ಅಥವಾ ಅಭ್ಯರ್ಥಿ ನಿಯಮಗಳನ್ನು ಉಲ್ಲಂಘಿಘಿಸಿದರೆ ಆಯೋಗವು ಅಂಥವರ ಜಾಲತಾಣಗಳ ಖಾತೆಗಳನ್ನು ಅಮಾನತು ಮಾಡುವ ಇಲ್ಲವೇ ಬ್ಲಾಕ್ ಮಾಡುವಂತೆ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಖಡಕ್ ಸೂಚನೆ ನೀಡಲಿದೆ. ಫ್ಯಾಕ್ಟ್ ಚೆಕ್ಕಿಂಗ್, ಸುಳ್ಳು ಸುದ್ದಿ ತಡೆಯುವುದು, ಸೂಕ್ಷ್ಮ ಪ್ರದೇಶಗಳಲ್ಲಿಭದ್ರತೆ ಹೆಚ್ಚಿಸುವುದರತ್ತವೂ ಆಯೋಗವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವು ಪಡೆಯಲಿದೆ.