ನವದೆಹಲಿ : ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಸಂಕಷ್ಟ ಕಡಿಮೆಯಾಗುವ ಸಾಧ್ಯತೆ ಕಾಣುತ್ತಿಲ್ಲ. ಯಾಕಂದ್ರೆ, ಜಾರಿ ನಿರ್ದೇಶನಾಲಯ ಶುಕ್ರವಾರ ಅವರ ವಿರುದ್ಧ 3,000 ಕೋಟಿ ರೂ. ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲುಕ್ ಔಟ್ ಸುತ್ತೋಲೆ ಹೊರಡಿಸಿದೆ.
ಅನಿಲ್ ಅಂಬಾನಿ ಅವರ ಗ್ರೂಪ್ ಕಂಪನಿಗಳ ವಿರುದ್ಧದ ಬ್ಯಾಂಕ್ ಸಾಲ ವಂಚನೆ ಆರೋಪದ ಹಣ ವರ್ಗಾವಣೆ ಪ್ರಕರಣದಲ್ಲಿ ಆಗಸ್ಟ್ 5ರಂದು ವಿಚಾರಣೆಗೆ ಇಡಿ ಅವರಿಗೆ ಸಮನ್ಸ್ ನೀಡಿತ್ತು ವರದಿಯಾಗಿದೆ.
ಅಂಬಾನಿ ಅವರನ್ನ ದೆಹಲಿಯಲ್ಲಿರುವ ಇಡಿ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಳ್ಳಲಾಗಿದೆ ಮತ್ತು ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಏಜೆನ್ಸಿ ಅವರ ಹೇಳಿಕೆಯನ್ನು ದಾಖಲಿಸುವ ನಿರೀಕ್ಷೆಯಿದೆ. ಅವರ ಗ್ರೂಪ್ ಕಂಪನಿಗಳ ಕೆಲವು ಕಾರ್ಯನಿರ್ವಾಹಕರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಜುಲೈ 24ರಂದು ಇಡಿ ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಇದು ಸಂಭವಿಸಿದೆ, ಇದು 50 ಕಂಪನಿಗಳ 35 ಆವರಣಗಳು ಮತ್ತು 25 ಜನರಲ್ಲಿ ಮೂರು ದಿನಗಳ ಕಾಲ ನಡೆಯಿತು.