ಬಾಗಲಕೋಟೆ : ನೋಡುತ್ತೀರಿ ನನ್ನ ಹಣೆಬರಹದಲ್ಲಿ ಸಿಎಂ ಆಗುತ್ತೇನೆ ಎಂದು ಬರೆದಿದೆ. ಮುಂದಿನ ಸಿಎಂ ನಾನೇ ಎಂದು ಬಿಜೆಪಿಯಿಂದ ಉಚ್ಛಾಟಿತರಾಗಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್, ಯತ್ನಾಳ ಸಿಎಂ ಆಗೋದಿರಲಿ 2028ಕ್ಕೆ ಶಾಸಕನಾಗಿ ಗೆದ್ದು ಬರಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಯತ್ನಾಳ್ ಮತ್ತೆ ಗೆಲ್ಲುತ್ತೇನೆ ಅನ್ನೋದು ತಿರುಕನ ಕನಸು. 2028ಕ್ಕೆ ಗೆದ್ದು ವಿಧಾನಸೌಧಕ್ಕೆ ಬರಲಿ ನೋಡೋಣ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ವಿಜಯಾನಂದ ಕಾಶಪ್ಪನವರು ಹೇಳಿಕೆ ನೀಡಿದ್ದು ಹತ್ನಾಳ ಸಿಎಂ ಆಗುವುದಿಲ್ಲ ಶಾಸಕನಾಗಿ ಗೆದ್ದು ಬರಲಿ ಎಂದು ಸವಾಲು ಹಾಕಿದರು.