ಬೆಂಗಳೂರು : ಕಳೆದ ನವೆಂಬರ್ 17ರಂದು ನೆಲಮಂಗಲದ ಗೊಲ್ಲರಹಟ್ಟಿಯ ಬಳಿ ಮಹಿಳೆ ಕರಿಯಮ್ಮನನ್ನು ಬಲಿ ಪಡದಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ನೆಲಮಂಗಲದಲ್ಲಿ ಕೊನೆಗೂ ಚಿರತೆ ಬೋನಿಗೆ ಬಿದ್ದಿದೆ. ಮಹಿಳೆಯನ್ನು ಬಲಿ ಪಡೆದು ಭೀತಿ ಹುಟ್ಟಿಸಿದ ಚಿರತೆಯನ್ನು ಇದೀಗ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಇದೀಗ ಚಿರತೆ ಸೆರೆಯಾಗಿದೆ. ಗೊಲ್ಲರಹಟ್ಟಿಯ ಕರಿಯಮ್ಮಳನ್ನು ಚಿರತೆ ಬಳಿ ಪಡೆದಿತ್ತು. ನವೆಂಬರ್ 17ಕ್ಕೆ ಮಹಿಳೆ ಬಲಿಯಾಗಿದ್ದಳು.
ನೆಲಮಂಗಲದ ಸುತ್ತಮುತ್ತಲು ಈ ಒಂದು ಚಿರತೆ ಭಯ ನಿರ್ಮಾಣ ಮಾಡಿತ್ತು. ಕಳೆದ ಹಲವು ದಿನಗಳಿಂದ ಜಾಗದಲ್ಲಿ ಎಸಿಎಫ್ ಮೊಕ್ಕಂ ಹೂಡಿತ್ತು. ಸುಮಾರು 40 ಜನ ಸಿಬ್ಬಂದಿ ಜೊತೆ ಸೆರೆ ಹಿಡಿಯಲು ಕಾದು ಕುಳಿತಿದ್ದರು. ಇದೀಗ ಎಸಿಎಫ್ ನಿಜಾಮುದ್ದೀನ್ ಚಿರತೆ ಹಿಡಿಯಲು ಯಶಸ್ವಿಯಾಗಿದ್ದಾರೆ. ಆದರೂ ಈ ಪ್ರದೇಶದಲ್ಲಿ ಹಲವಾರು ಚರಿತೆಗಳ ಹಾವಳಿ ಇದೆ ಎನ್ನಲಾಗಿದೆ.