ಹಾವೇರಿ : ಕಳೆದ ಒಂದುವಾರದಿಂದ ಹಾವೇರಿ ಜಿಲ್ಲೆಯಲ್ಲಿ ಶಿರತೆಯೊಂದು ತೀವ್ರ ಆತಂಕ ಮೂಡಿಸಿದ ಹಾವೇರಿ ಜಿಲ್ಲೆಯ ಮಾಳಾಪುರ ಹಾಗೂ ಅಗಡಿ ಗ್ರಾಮದ ಜನರಲ್ಲಿ ಚಿರತೆ ಹಾವಳಿಯಿಂದ ಜನರು ನಿದ್ದೆಗೆಟ್ಟಿದ್ದರು. ಇದೀಗ ಸತತ 8 ಗಂಟೆಗಳ ಕಾರ್ಯಾಚರಣೆಯ ಫಲವಾಗಿ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿದಿದ್ದಾರೆ.
ಹೌದು ಸತತ 8 ಗಂಟೆಗಳ ಬಳಿಕ ಚಿರತೆ ಸೆರೆ ಸಿಕ್ಕಿದೆ. ಹಾವೇರಿ ತಾಲೂಕಿನ ಮಾಳಾಪುರ ಬಳಿ ಚಿರತೆ ಇದೀಗ ಸರಿ ಸಿಕ್ಕಿದೆ. ಮಾಳಾಪುರ ಬಳಿ ಚಿರತೆ ಕಾಲುವೆಯಲ್ಲಿ ಅವಿತು ಕುಳಿತುಕೊಂಡಿತು. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ಒಂದು ವಾರದಿಂದ ಮಾಳಾಪುರ ಮತ್ತು ಭೂವಿರಾಪುರ ಮತ್ತು ಅಗಡಿ ಗ್ರಾಮದ ಸುತ್ತಮುತ್ತಲು ಈ ಒಂದು ಚರತೆ ಆತಂಕ ಹುಟ್ಟಿಸಿತ್ತು.ಇದೀಗ ಚಿರತೆಯ ಹೆಸರೆಯಿಂದ ಮೂರು ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.