ಬೆಂಗಳೂರು : ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆ ಆರಂಭ ವಿಧಾನಸೌಧದ ಸಮಿತಿ ಕೊಠಡಿ ಸಂಖ್ಯೆ 106 ರಲ್ಲಿ ಈ ಒಂದು ಸಲಹಾ ಸಮಿತಿ ಸಭೆ ಆರಂಭವಾಗಿದೆ.
ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬಿ ವೈ ವಿಜಯೇಂದ್ರ ಸಚಿವ ಎಚ್ ಕೆ ಪಾಟೀಲ್ ಅಶೋಕ್ ಪಟ್ಟಣ ಸೇರಿದಂತೆ 16 ಮಂದಿ ಭಾಗಿಯಾಗಿದ್ದಾರೆ. ವಿಧೇಯಕಗಳ ಮಂಡನೆ ವ್ಯಕ್ತಿಯ ಕಲಾಪದ ಮೇಲಿನ ಚರ್ಚೆ ಸೇರಿದಂತೆ ಕಲಾಪ ನಡೆಸುವ ಬಗ್ಗೆ ಸಮಲೋಚನೆ ನಡೆಸುತ್ತಿದ್ದಾರೆ.








