ಬೆಂಗಳೂರು :ಮೊಬೈಲ್ ಬಿಡಿ-ಪುಸ್ತಕ ಹಿಡಿ” ಅರಿವಿನ ಅಭಿಯಾನವನ್ನು ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವ ಕುರಿತು ಮಹತ್ವದ ಸುತ್ತೋಲೆ ಹೊರಡಿಸಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ಬನ್ನಿಕುಪ್ಪೆ(ಬಿ)ಕ್ಲಸ್ಟರ್ನಲ್ಲಿ ಸಮೂಹ ಸಂಪನ್ಮೂಲ ಶಿಕ್ಷಕರಾದ (ಸಿ.ಆರ್.ಪಿ) ಶ್ರೀ ಚಿಕ್ಕವೀರಯ್ಯ ಟಿ.ಎನ್ ಹಾಗೂ ಇವರ ಶಿಕ್ಷಕರ ತಂಡದ ವತಿಯಿಂದ ದಿನಾಂಕ:14.02.2025 ರಿಂದ “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಅರಿವಿನ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ಅಭಿಯಾನವು ವಿದ್ಯಾರ್ಥಿಗಳು/ಪೋಷಕರು ಹಾಗೂ ಸಾರ್ವಜನಿಕರು ಮೊಬೈಲ್ ಬಳಸುವ ಪ್ರಮಾಣವನ್ನು ಕಡಿಮೆಗೊಳಿಸಿ, ಪುಸ್ತಕ ಓದುವ ಅಭಿರುಚಿಗೆ ಪೂರಕವಾಗಿ ಜನಪ್ರಿಯವಾಗುತ್ತಿದೆ. ಸದರಿ ಅಭಿಯಾನವು ರಾಜ್ಯಾದ್ಯಂತ ಪ್ರಭಾವ ಬೀರಿ ಸದ್ದು ಮಾಡುತ್ತಿದ್ದು, ಬಹುತೇಕ ಎಲ್ಲಾ ದೃಶ್ಯ/ಮುದ್ರಣ ಮಾಧ್ಯಮ/ಆಕಾಶವಾಣಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿದೆ.
ಆದ್ದರಿಂದ, 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಇಡೀ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಆರಂಭದ ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರ್ಥನಾ ಅವಧಿಯಲ್ಲಿ ಮತ್ತು ಪೋಷಕರು/ಸಾರ್ವಜನಿಕರಿಗೆ ಅನುಕೂಲಕರವಾದ ವೇಳೆಯಲ್ಲಿ ಈ ಅಭಿಯಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಎಂಬ ವಿನೂತನ ಕಾರ್ಯಕ್ರಮದ ಬಗ್ಗೆ ಸರ್ಕಾರದಿಂದ ಸುತ್ತೋಲೆ ಹೊರಡಿಸಬೇಕೆಂದು ಮತ್ತು ಈ ಮುಖೇನ ಮೊಬೈಲ್ ಬಳಕೆಯಿಂದಾಗಬಹುದಾದ ದುಷ್ಪರಿಣಾಮ ಹಾಗೂ ಪುಸ್ತಕ ಓದುವುದರಿಂದ ವಿದ್ಯಾರ್ಥಿಗಳಿಂದ ಆಗುವ ಜ್ಞಾನವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಬೇಕೆಂದು ಕೋರಿರುತ್ತಾರೆ.
ಈ ಸಂಬಂಧ ಉಲ್ಲೇಖ(01) ಸರ್ಕಾರದ ಪತ್ರದಲ್ಲಿ ಲಗತ್ತಿಸಿರುವ ಪತ್ರದಂತೆ, ತಮ್ಮ ಕಾಲೇಜು/ವಿಭಾಗಗಳಲ್ಲಿ “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಅರಿವಿನ ಅಭಿಯಾನವನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮವಹಿಸುವಂತೆ ಈ ಮೂಲಕ ತಿಳಿಸಲಾಗಿದೆ.

![’ಆಕೆಯೇನಕ್ಕೆ ಅಲ್ಲಿಗೆ ಬಂದಿದ್ದಾರೆ?’: ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಟಿ ತ್ರಿಶಾ ವಿರುದ್ಧ ನೆಟ್ಟಿಗರ ಆಕ್ರೋಶ! ದಳಪತಿ ವಿಜಯ್ ರಾಜಕೀಯ ಪ್ರವೇಶ - [Dalapathi Vijay Politics], ತ್ರಿಶಾ ಕೃಷ್ಣನ್ ತಿಳಿ ನೀಲಿ ಸೀರೆ - [Trisha Krishnan in Blue Saree], ತಮಿಳಗ ವೆಟ್ರಿ ಕಳಗಂ ಮುಖ್ಯಮಂತ್ರಿ - [TVK Chief Minister Vijay]](https://kannadanewsnow.com/kannada/wp-content/uploads/2026/05/ವಿಜಯ್-ಪ್ರಮಾಣವಚನ-ಕಾರ್ಯಕ್ರಮದಲ್ಲಿ-ತ್ರಿಶಾ-ಕೃಷ್ಣನ್-Trisha-Krishnan-at-Vijay-Swearing-in-Ceremony-300x169.jpg)







