ಮಂಡ್ಯ : ಮಂಡ್ಯದಲ್ಲಿ ಕೆಎಸ್ಆರ್ಟಿಸಿ ಚಾಲಕನೊಬ್ಬ ಮೊಬೈಲ್ ನಲ್ಲಿ ರಿಲ್ಸ್ ನೋಡಿಕೊಂಡು ಬಸ್ ಓಡಿಸುವ ವಿಡಿಯೋ ವೈರಲಾಗಿದೆ. ಮಳವಳ್ಳಿಯಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಮಹೇಶ್ ಮೊಬೈಲ್ ನಲ್ಲಿ ರೀಲ್ ವೀಕ್ಷಣೆ ಮಾಡಿದ್ದಾರೆ.
ಚಾಲಕನ ನಿರ್ಲಕ್ಷ್ಯ ಚಾಲನೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ ಈ ರೀತಿ ಬೇಜವಾಬ್ದಾರಿ ತೋರಿದ್ದಾರೆ. ಹೇಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಚಾಲಕನ ವಿರುದ್ಧ ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಸಹ ಆಗ್ರಹಿಸಿದ್ದಾರೆ.








