ಮಡಿಕೇರಿ : ಸಾಮಾನ್ಯವಾಗಿ ವಾಹನ ಇರಲಿ ಬೈಕ್ ಇರಲಿ ಮೊಬೈಲ್ ಬಳಸುವುದು ಅಪಘಾತಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಲೇ ಇರುತ್ತಾರೆ ಆದರೆ ಇದೀಗ ಕೊಡಗಿನಲ್ಲಿ ಪ್ರಯಾಣಿಕರನ್ನು ಹೊತ್ತಂತಹ ಕೆಎಸ್ಆರ್ಟಿಸಿ ಚಾಲಕ ಒಬ್ಬ ಬಸ್ ಚಾಲನೆ ಮಾಡುತ್ತಲೇ ಮೊಬೈಲ್ ಬಳಸಿರುವ ವಿಡಿಯೋ ವೈರಲ್ ಆಗಿದ್ದು, ಸದ್ಯ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.
ಅರೆಸ್ಟ್ ಆದಂತ ಚಾಲಕನನ್ನು ವೇಣುಗೋಪಾಲ್ ಎಂದು ತಿಳಿದುಬಂದಿದೆ. ಈತ ಪುತ್ತೂರು ಡಿಪೋ ಬಸ್ ಚಾಲಕ ಮೊಬೈಲ್ ಬಳಸುತ್ತಾ ಚಾಲನೆ ಮಾಡಿದ್ದಾರೆ. ಚಾಲಕ ವೇಣುಗೋಪಾಲ್ ಬಸ್ ಚಾಲನೆ ಮಾಡುತ್ತ ಮೊಬೈಲ್ ಬಳಕೆ ಮಾಡುತ್ತಿರುವ ವಿಡಿಯೋವನ್ನು ಪ್ರಯಾಣಿಕರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬಸ್ ಮಡಿಕೇರಿಯಿಂದ ಬಿರುನಾಣಿಗೆ ಹೋಗುತ್ತಿತ್ತು. ಚಾಲಕ ಮೊಬೈಲ್ ಬಳಕೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊಬೈಲ್ ಬಳಕೆ ಮಾಡುತ್ತಿರುವುದನ್ನು ನಿರ್ವಾಹಕ ರೂಪೇಶ್ ವಿಡಿಯೋ ಮಾಡಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದ್ದು, ವೇಣುಗೋಪಾಲ್ ಡಿಪೋ ಬಳಿ ಕೋವಿ ತಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ರೂಪೇಶ್‌ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೆ ಸಾರಿಗೆ ಸಂಸ್ಥೆ ಚಾಲಕ ವೇಣುಗೋಪಾಲ್ನನ್ನು ಅಮಾನತು ಮಾಡಿದೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ವೇಣುಗೋಪಾಲ್ನನ್ನು ಬಂಧಿಸಿದ್ದಾರೆ.







