ಮಂಡ್ಯ : ಮಂಡ್ಯದಲ್ಲಿ ಭೀಕರ ಬಸ್ ಅಪಘಾತವಾಗಿದ್ದು, ಅಂಡರ್ ಪಾಸ್ ಸೇತುವೆಗೆ ಕೆಎಸ್ಆರ್ಟಿಸಿ ಬಸ್ ಒಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ನಲ್ಲಿ ಇದ್ದ 19 ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೋಡಿಹಳ್ಳಿ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ವಿಜಪೇಟೆಗೆ ಈ ಒಂದು ಬಸ್ ತೆರಳುತ್ತಿತ್ತು ರಾಷ್ಟ್ರೀಯ ದಶಪಥ ಸರ್ವಿಸ್ ರಸ್ತೆಯಲ್ಲಿ ಈ ಒಂದು ಆಕ್ಸಿಡೆಂಟ್ ಆಗಿದ್ದು ಚಾಲಕ ನಿಯಂತ್ರಣ ತಪ್ಪಿ ಅಂಡರ್ ಪಾಸ್ ಸೇತುವೆಗೆ ಡಿಕ್ಕಿ ಹೊಡೆದಿದ್ದು ಸದ್ಯ ಗಾಯಾಳುಗಳನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








