ಬೆಳಗಾವಿ: ಜಗತ್ತಿನಲ್ಲಿ ರೋಗಗಳು ಜಾಸ್ತಿಯಾಗಲಿದ್ದು, ಜನರ ಆಯಸ್ಸು ಕಡಿಮೆಯಾಗಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಜಗತ್ತಿನಲ್ಲಿ ರೋಗ ಜಾಸ್ತಿಯಾಗಲಿದ್ದು, ಜನರು ಆಯಸ್ಸು, ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಬರುವ ದಿನಗಳು ಶುಭವಿಲ್ಲ. ಒಳ್ಳೆಯ ದಿನಗಳೂ ಇವೆ. ಆದರೆ ಕೆಟ್ಟ ದಿನಗಳೇ ಜಾಸ್ತಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಭೀಕರ ಮಳೆಯಾಗುತ್ತದೆ. ಗುಡ್ಡ ಕುಸಿತವಾಗುತ್ತದೆ, ಸಾವು ನೋವು ಸಂಭವಿಸುತ್ತದೆ ಎಂದು ಈ ಹಿಂದೆ ಹೇಳಿದ್ದೆ. ಇದು ಅಮಾವಾಸ್ಯೆಯವರೆಗೂ ಇರುತ್ತದೆ. ಇದೀಗ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗುತ್ತಿದೆ. ಅಮವಾಸ್ಯೆ ನಂತರ ೀ ಸಮಸ್ಯೆ ಮುಂದಿನ ಭಾಗದಲ್ಲಿ ಆಗುತ್ತದೆ ಎಂದು ತಿಳಿಸಿದ್ದಾರೆ.