ಕೊಡಗು : ಇಂದು ಕೊಡವಾಮೆ ಬಾಳು ಪಾದಯಾತ್ರೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಇಂದು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಅಲ್ಲದೆ ಮಡಿಕೇರಿ ನಗರದಲ್ಲಿ ಇಂದು ವಾಹನಗಳ ಪಾರ್ಕಿಂಗ್ ಗೆ ನಿರ್ಬಂಧ ವಿಧಿಸಲಾಗಿದೆ. ಮಡಿಕೇರಿ ನಗರದಾದ್ಯಂತ ಭದ್ರತೆಗಾಗಿ 700 ಪೊಲೀಸರನ್ನು ನೀಯೋಜನೆ ಮಾಡಲಾಗಿದೆ. ಸಂಸ್ಕೃತಿ ರಕ್ಷಣೆಗಾಗಿ ಕೊಡವಾಮೆ ಬಾಳು ಪಾದಯಾತ್ರೆ ಆಯೋಜನೆ ಮಾಡಲಾಗಿದ್ದು, ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.