ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಭಾರಿ ಸದ್ದು ಮಾಡುತ್ತಿದ್ದು, ಗ್ರಹ ಸಚಿವರು ಎಲ್ಲೇ ಇದ್ದರೂ ಭೇಟಿಯಾಗಿ ದೂರು ನೀಡುತ್ತೇನೆ ಎಂದು ಹೇಳಿದ ಸಹಕಾರ ಸಚಿವ ಕೇಂದ್ರ ಇದೀಗ ಬೆಂಗಳೂರಿನ ಸದಾಶಿವನಗರದಲ್ಲಿರುವ ಗ್ರಹ ಸಚಿವ ಜಿ ಪರಮೇಶ್ವರ್ ಅವರ ನಿವಾಸಕ್ಕೆ ಹನಿ ಡ್ರಾಪ್ ಕುರಿತು ದೂರ ನೀಡಲು ಸಚಿವ ಕೆ ಎನ್ ರಾಜಣ್ಣ ದಾಖಲೆಗಳ ಸಮೇತ ಆಗಮಿಸಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಟಿ ಬೇಗೂರು ಗ್ರಾಮದಲ್ಲಿ ಕೆ.ಎನ್ ರಾಜಣ್ಣ ಗೃಹ ಸಚಿವರನ್ನು ಭೇಟಿಯಾದರು. ಹನಿಟ್ರ್ಯಾಪ್ ಕುರಿತು ದೂರನ್ನು ನೀಡಲು ಅವರನ್ನು ಭೇಟಿಯಾದಾಗ ಗೃಹ ಸಚಿವರು ರಾಜಣ್ಣ ಅವರಿಗೆ ಸಾಯಂಕಾಲ ಸದಾಶಿವನಗರ ನಿವಾಸಕ್ಕೆ ಬನ್ನಿ ಎಂದು ತಿಳಿಸಿದ್ದರು. ಇದೀಗ ಕೆ.ಎನ್ ರಾಜಣ್ಣ ದಾಖಲೆಗಳ ಸಮೇತ ಗೃಹ ಸಚಿವರ ನಿವಾಸಕ್ಕೆ ಆಗಮಿಸಿದ್ದಾರೆ.
ಒಂದು ವೇಳೆ ಕೆ. ಎನ್ ರಾಜಣ್ಣ ಗೃಹ ಸಚಿವರಿಗೆ ದೂರು ನೀಡಿದರೆ, ಕೂಡಲೇ ಗದಸುವರು ಈ ಕುರಿತು ಉನ್ನತ ಮಠದ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುತ್ತೇನೆ ಎಂದು ಈಗಾಗಲೇ ತಿಳಿಸಿದರು ಹಾಗಾಗಿ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ಆಗುವ ಸಾಧ್ಯತೆಯಿದ್ದು, ತನಿಖೆಯಲ್ಲಿ ಯಾರ ಕೈವಾಡ ಇದೆ ಎನ್ನುವುದು ಬಯಲಾಗಲಿದೆ.