ಬೆಂಗಳೂರು : ಸಚಿವ ಸಂಪುಟ ಪುನಾರಚನೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಲವು ತೋರಿಸಿದ್ದು, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ ಜೊತೆಗೆ ಚರ್ಚಿಸಿ ಈ ಕುರಿತು ತೀರ್ಮಾನಿಸೋಣ ನೀವು ಮತ್ತೊಮ್ಮೆ ಬರಬೇಕಾಗುತ್ತದೆ ಅಂತ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ.
ನಿನ್ನೆ ವರಿಷ್ಠರನ್ನು ಭೇಟಿಯಾಗಲು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದರು. ಈ ವೇಳೆ ಸಂಪುಟ ಪುನಾರಚನೆ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ. ನಾವೆಲ್ಲ ಸೇರಿ ಚರ್ಚೆ ಮಾಡಿ ರಾಹುಲ್ ಗಾಂಧಿ ಅವರಿಗೆ ವರದಿ ಕೊಡೋಣ ಅಂತಿಮ ತೀರ್ಮಾನ ಅವರೇ ತೆಗೆದುಕೊಳ್ಳಲಿ. ಸಂಪುಟ ಪುನಾರಚನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ತಯಾರಿ ಮಾಡಿಕೊಂಡಿರುವ ಕುರಿತು ಖರ್ಗೆ ಕೇಳಿದ್ದಾರೆ.
ಎಷ್ಟು ಸ್ಥಾನ ಬದಲಾವಣೆ ಮಾಡಬೇಕು? ಹಾಗೂ ಯಾರನ್ನು ಕೈಬಿಡಬಹುದು? ಯಾರನ್ನು ಸೇರ್ಪಡೆ ಮಾಡಬಹುದು? ಎಂಬುವುದರ ಕುರಿತು ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದಿದ್ದಾರೆ ಮಾಹಿತಿ ಪಡೆದ ಬಳಿಕ ಚರ್ಚಿಸಿ ತಿಳಿಸುವುದಾಗಿ ಖರ್ಗೆ ಭರವಸೆ ನೀಡಿದ್ದಾರೆ ಸದ್ಯಕ್ಕೆ ಯಾವುದೇ ಗೊಂದಲ ಬೇಡ ಅಂತ ಸ್ಪಷ್ಟಪಡಿಸಿದ್ದಾರೆ.







