ಬೆಂಗಳೂರು : ಕರೋನ ವೇಳೆ ಟ್ರಾವೆಲ್ಸ್ ನಷ್ಟ ಆಗಿದ್ದಕ್ಕೆ ವ್ಯಕ್ತಿ ಒಬ್ಬ ಕಳ್ಳತನಕ್ಕೆ ಇಳಿದಿದ್ದಾನೆ ಸದ್ಯ ಬೆಂಗಳೂರಿನ ಭಯಪನ ಹಳೆ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ ಸಿನಿಮಾ ಸ್ಟೈಲ್ ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಕಳ್ಳತನ ಮಾಡುತ್ತಿದ್ದ. ಬಂಧಿತ ಆರೋಪಿಯನ್ನು ದಾವಣಗೆರೆ ಭಾಗದಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ರಾಜ ಎಂದು ತಿಳಿದುಬಂದಿದೆ.
ಕರೋನ ವೇಳೆ ಟ್ರಾವೆಲ್ಸ್ ಲಾಸ್ ಆಗಿ ಜೀವನಕ್ಕೆ ಕಷ್ಟ ಆಗುತ್ತಿತ್ತು ಹಾಗಾಗಿ ಆತ ಮಾಸ್ಕ ಧರಿಸಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಳಿ ಇದ್ದ 1.84 ಕೋಟಿ ಮೌಲ್ಯದ 1.25 ಕೆಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಇದುವರೆಗೂ 18 ಕಳ್ಳತನ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲೂ ಕೂಡ ನಾಲ್ಕು ಪ್ರಕರಣ ದಾಖಲಾಗಿದ್ದು ಬೆಳಕಿಗೆ ಬಂದಿದೆ. ಸದ್ಯ ಭಯಪನಹಳ್ಳಿ ಪೊಲೀಸ್ರಿಂದ ತನಿಖೆ ಮುಂದುವರೆದಿದೆ.








