ಮಂಗಳೂರು : ಕೇರಳದ ಕೊಳಚೆ ತ್ಯಾಜ್ಯವನ್ನು ಮಂಗಳೂರಿನಲ್ಲಿ ಡಂಪ್ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಮಂಗಳೂರಿನ ಪಾಲಿಕೆ ಅಧಿಕಾರಿಗಳು ದಾಳಿ ಮಾಡಿದ್ದು ಕೇರಳದ ಎರಡು ತ್ಯಾಜ್ಯ ಟ್ಯಾಂಕರ್ ಗಳಿಗೆ 10000 ದಂಡ ವಿಧಿಸಿದ್ದು ಅಲ್ಲದೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ಕೂಡ ದಾಖಲಿಸಿದ್ದಾರೆ.
ಕೇರಳ ಭಾಗದಿಂದ ತಲಪಾಡಿ ಗೇಟ್ ಮೂಲಕ ತ್ಯಾಜ್ಯ ವಾಹನಗಳು ಆಗಮಿಸುತ್ತಿದ್ದು, ತಲಪಾಡಿ ಮತ್ತಿತರ ಗಡಿ ಭಾಗಗಳ ಮೂಲಕ ತ್ಯಾಜ್ಯಗಳನ್ನು ತುಂಬಿಕೊಂಡು ವಾಹನಗಳು ಎಂಟ್ರಿ ಪಡೆಯುತ್ತಿವೆ ಕೇರಳದ ತ್ಯಾಜ್ಯ ನಿರ್ವಹತು ತಂದಿದ್ದ ಸಿವಿಲ್ ಟ್ಯಾಂಕರ್ ಗಳು. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕೊಳಚೆ ತ್ಯಾಜ್ಯ ಸ್ಥಳಾಂತರ ನಡೆಯುತ್ತಿದೆ.ಕೊಳಚೆ ತ್ಯಾಜ್ಯ ತಂದು ಖಾಸಗಿ ಟ್ಯಾಂಕರ್ ಗಳು ಸುರಿಯುತ್ತಿವೆ.
ಕೇರಳದಿಂದ ತ್ಯಾಜ್ಯ ತಂದು ಸುರಿಯುವ ವೇಳೆ ಖದೀಮರು ಸಿಕ್ಕಿ ಬಿದ್ದಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.ಕೇರಳದ ಕೊಳಚೆ ತ್ಯಾಜ್ಯ ತಂದು ಮ್ಯಾನ್ ಹೋಲ್ ಮತ್ತು ನದಿಗಳು ಚರಂಡಿ ಕಾಲುವೆಗೆ ತ್ಯಾಜ್ಯದ ನೀರು ಸುರಿದು ಹೋಗುತ್ತಿದ್ದಾರೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಗೆ ಪಾಲಿಕೆ ಅಧಿಕಾರಿಗಳು ಈ ಕುರಿತು ದೂರು ನೀಡಿದ್ದಾರೆ. ಅಲ್ಲದೇ ಎರಡು ಟ್ಯಾಂಕರ್ ಗಳಿಗೆ ತಲಾ 10,000 ದಂಡ ಪಾಲಿಕೆ ಅಧಿಕಾರಿಗಳು ವಿಧಿಸಿದ್ದಾರೆ.