ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 11 ರ ನಾಳೆಯಿಂದ ಆ.22ವರೆಗೆ ನಡೆಯಲಿದೆ.
ಮುಂಗಾರು ಅಧಿವೇಶನದಲ್ಲಿ 24ಕ್ಕೂ ಹೆಚ್ಚು ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆದುಕೊಳ್ಳುವ ನಿರೀಕ್ಷೆ ಇದೆ. ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ತಂತ್ರ ರೂಪಿಸಿದ್ದರೆ, ಸುಗಮ ಕಲಾಪಕ್ಕೆ ಅಗತ್ಯವಾದ ಪ್ರತಿತಂತ್ರವನ್ನು ಆಡಳಿತ ಪಕ್ಷ ಹೆಣೆದಿದೆ. ಸ್ವಾತಂತ್ರ್ಯ ದಿನಾಚರಣೆ ಸೇರಿ 3 ದಿನ ರಜೆ ಇರುವುದರಿಂದ ಒಟ್ಟು 9 ದಿನ ಅಧಿವೇಶನ ನಡೆಯಲಿದೆ.