ಕಲಬುರ್ಗಿ : ಕಳೆದ ಎರಡು ದಿನಗಳ ಹಿಂದೆ ಕಲ್ಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಬಿಕ್ಷಾಟನೆ ಮಾಡಿದ್ದ ಹಣದಲ್ಲಿ ಪಾಲು ನೀಡಿಲ್ಲವೆಂದು ಮಂಗಳಮುಖಿಯರೇ ಸೇರಿಕೊಂಡು ಓರ್ವ ಮಂಗಳಮುಖಿಯನ್ನು ಬೆತ್ತಲೆಗೊಳಿಸಿ, ತಲೆ ಬೋಳಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಶೀಲಾ ಅಲಿಯಾಸ್ ವಿಜಯಕುಮಾರ್ (38), ಭವಾನಿ ಅಲಿಯಾಸ್ ಬಸವರಾಜ್ (24) ಮತ್ತು ಅಂಕೀತಾ ಅಲಿಯಾಸ್ ಅಂಕುಶ್ ಬಂಧಿತ ಮಂಗಳಮುಖಿಯರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬಂಧಿತ ಆರೋಪಿಗಳು ಹಲ್ಲೆಗೆ ಒಳಗಾದ ಮಂಗಳಮುಖಿಯ ಜೊತೆಗೆ ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ.
ಈ ವೇಳೆ ಹಲ್ಲೆಗೆ ಒಳಗಾದ ಮಂಗಳ ಮುಖಿಯನ್ನು ಉಳಿದ ಮಂಗಳಮುಖಿಯರು ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ ಮಾಡಿದ್ದಾರೆ ಈ ಒಂದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಸಾರ್ವಜನಿಕರು ಈ ಒಂದು ಕೃತಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಳಿಕ ಅಶೋಕ್ ನಗರ ಠಾಣೆ ಪೊಲೀಸರು ಸಧ್ಯ ಮೂವರನ್ನು ಅರೆಸ್ಟ್ ಮಾಡಿದ್ದಾರೆ.