ಕಲಬುರ್ಗಿ : ನ್ಯಾಯಾಲಯದ ಆವರಣದಲ್ಲಿ ಯುವಕನೊಬ್ಬನ ಮೇಲೆ ಮೂವರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ನಿನ್ನೆ ಯಾತನೂರು ಗ್ರಾಮದ ನಿವಾಸಿ ದೇವೇಂದ್ರ (27) ಎನ್ನುವ ಯುವಕನ ಮೇಲೆ ಕೋರ್ಟ್ ಅವರಣದಲ್ಲೇ ಮೂವರು. ಯುವಕರಿಂದ ಹಲ್ಲೆ ನಡೆಸಲಾಗಿದೆ. ಸಿದ್ದು, ಶಿವಲಿಂಗಪ್ಪ ಹಾಗೂ ಶ್ರೀಶೈಲ್ ಎಂಬುವವರಿಂದ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.ಗಾಯಗೊಂಡಿರುವ ದೇವ ಎಂದರೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕು ವರ್ಷಗಳ ಹಿಂದೆ ದೇವಿಂದ್ರ ಹಲ್ಲೆ ಆರೋಪಿಗಳಲ್ಲಿ ಒಬ್ಬನಾದ ಶಿವಲಿಂಗಪ್ಪನ ಸಹೋದರ ಸಂಗಪ್ಪನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ. ತಾಯಿ ಅನಾರೋಗ್ಯದ ಕಾರಣದ ನೀಡಿ, ಜಾಮೀನಿನ ಮೇಲೆ ಎರಡ್ಮೂರು ತಿಂಗಳ ಹಿಂದೆ ಜೈಲಿನಿಂದ ಹೊರಗೆ ಬಂದಿದ್ದ.
ಈ ನಡುವೆ ಶಿವಲಿಂಗಪ್ಪನ ಕುಟುಂಬದ ಯುವತಿಯೊಬ್ಬಳನ್ನು ದೇವಿಂದ್ರ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಆರೋಪಿಗಳು ದೇವಿಂದ್ರನ ಮೇಲೆ ಹಲ್ಲೆ ಮಾಡಿ ಆಟೋದಲ್ಲಿ ಅಪಹರಿಸಲು ಯತ್ನಿಸಿದ್ದಾರೆ. ಪ್ರತಿರೋಧ ತೋರಿದ ದೇವಿಂದ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ.