ಬೆಂಗಳೂರು : ಬೆಂಗಳೂರಲ್ಲಿ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾನೆ. ಜೆಪ್ಟೊ ಡೆಲಿವರಿ ಬಾಯ್ ನಿಂದ ಗ್ರಾಹಕನ ಮೇಲೆ ಹಲ್ಲೆ ನಡೆದಿದೆ. ಮೇ 21ರಂದು ಬಸವೇಶ್ವರನಗರದಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಕುರಿತಂತೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜೆಪ್ಟೊದಲ್ಲಿ ಶಶಾಂಕ್ ಎನ್ನುವವರ ಅವರ ಪತ್ನಿ ಆರ್ಡರ್ ಮಾಡಿದ್ದಾರೆ. ಈ ವೇಳೆ ರಿಸೀವ್ ಮಾಡಿಕೊಳ್ಳುವಾಗ ಡೆಲಿವರಿ ಬಾಯ್ ಕಿರಿಕ್ ಮಾಡಿದ್ದಾನೆ. ಅಡ್ರೆಸ್ ತಪ್ಪಾಗಿ ಕೊಟ್ಟಿದ್ದೀರಾ ಎಂದು ಮಾತಿಗೆ ಮಾತಿಗೆ ಬೆಳೆದು ಹಲ್ಲೆ ಮಾಡಿದ್ದಾನೆ. ಶಶಾಂಕ್ ಮೇಲೆ ಕೈಯಿಂದ ಮುಖದ ಮೇಲೆ ಗುದ್ದಿದ್ದಾನೆ. ಈ ವೇಳೆ ಶಶಾಂಕ್ ಕಣ್ಣಿನ ಕೆಳಭಾಗದಲ್ಲಿ ಗಂಭೀರವಾದ ಗಾಯವಾಗಿದೆ. ಘಟನೆ ಕುರಿತು ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.