ಬೆಂಗಳೂರು: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಂತರ ಬಿಜೆಪಿ -ಜೆಡಿಎಸ್ ಸೀಟು ಹಂಚಿಕೆ ನಡೆಯಲಿದೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.ಈಗಾಗಲೇ ಸೀಟು ಹಂಚಿಕೆ ಕುರಿತು ಪ್ರಾಥಮಿಕ ಮಾತುಕತೆ ಮುಗಿದಿದ್ದು ಜೆಡಿಎಸ್ ಐದರಿಂದ ಆರು ಕ್ಷೇತ್ರಗಳನ್ನು ಕೇಳಿದೆ ಎನ್ನಲಾಗಿದೆ.
ಜನವರಿ 22ರ ನಂತರ ಅಂತಿಮ ಸುತ್ತಿನ ಮಾತುಕತೆ ನಡೆದು ಸೀಟು ಹಂಚಿಕೆ ಬಗ್ಗೆ ಸ್ಪಷ್ಟತೆ ಸಿಗಲಿದೆ.ನಿನ್ನೆ ಕುಮಾರಸ್ವಾಮಿ ಯವರು ನವದೆಹಲಿಯಲ್ಲಿ ಜೆಪಿ ನಡ್ಡಾ ,ಅಮಿತಾ ಷಾರನ್ನು ಭೇಟಿ ಆಗಿ ಮಾತುಕತೆ ನಡೆಸಿದರು. ಇವರಿಗೆ ನಿಖಿಲ್ ಕುಮಾರಸ್ವಾಮಿ ಸಾತ್ ನೀಡಿದರು.
ರಾಜ್ಯದಲ್ಲಿ ಜೆಡಿಎಸ್ ಸಾಮರ್ಥ್ಯ ಎಷ್ಟಿದೆ,ಬಿಜೆಪಿ ಶಕ್ತಿ ಎಷ್ಟಿದೆ ಎಂದು ಮನವರಿಕೆ ಮಾಡಿದರು.