ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ವಾರ್ ನಡೆಯುತ್ತಿದ್ದು ಡೆವಿಲ್ ಸಿನಿಮಾ ಬಿಡುಗಡೆ ಬಳಿಕ ಕೆಲವು ಕಿಡಿಗೇಡಿಗಳು ನಟ ಕಿಚ್ಚ ಸುದೀಪ್ ಹಾಗೂ ಸಾನ್ವಿ ಅವರ ಫೋಟೋ ಎಡಿಟ್ ಮಾಡಿ ಟ್ರೊಲ್ ಮಾಡಿದರು ಇದೀಗ ಈ ವಿಚಾರವಾಗಿ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿಕೊಂಡಿದ್ದು, ನನ್ನ ದೇಹ ಚರ್ಚೆಯ ವಿಷಯವಲ್ಲ ಎಂದು ತನನ್ನು ನೆಗೆಟಿವ್ ಟ್ರೋಲ್ ಮಾಡುವವರಿಗೆ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಕುಟುಕಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸಾನ್ವಿ ಸುದೀಪ್ ಸ್ಟೋರಿ ಹಾಕಿದ್ದಾರೆ. ನನ್ನ ದೇಹವು ಚರ್ಚೆಯ ವಿಷಯವಲ್ಲ. ನಿಮ್ಮ ಅಭಿಪ್ರಾಯ ಬೇಕಾದರೇ ನಾನು ಕೇಳುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ. ಶನಿವಾರ ನಡೆದ ಮಾರ್ಕ್ ಕೃತಜ್ಞತಾ ಸುದ್ದಿಗೋಷ್ಠಿಯಲ್ಲಿ ಸುದೀಪ್‌ಗೆ ಮಗಳ ಬಗ್ಗೆ ನೆಗೆಟಿವ್ ಟ್ರೋಲ್ ಕುರಿತು ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ತನ್ನ ಮಗಳ ವಿರುದ್ಧ ಮಾತಾಡುವವರಿಗೆ ಕಿಚ್ಚ ಸುದೀಪ್ ಖಡಕ್ ಕೌಂಟರ್ ಕೊಟ್ಟಿದ್ದರು.
ನಮಗೆ ಪ್ರೋತ್ಸಾಹ ಕೊಡುವವರ ಬಗ್ಗೆ ಮಾತಾಡೋಣ, ನನ್ನ ಬಗ್ಗೆ, ನನ್ನ ಮಗಳ ಬಗ್ಗೆ ನೆಗೆಟಿವ್ ಮಾತಾಡುವ ಯಾವನೋ ಬಗ್ಗೆ ನಾನು ಯಾಕೆ ಮಾತಾಡಲಿ ಎಂದಿದ್ದರು. ನನ್ನ ಮಗಳು ಸರ್, ಅವಳು ಏನು ಅಂತಾ ನನಗೆ ಗೊತ್ತು. ನನ್ನ ಮಗಳು ನನಗಿಂತ ತುಂಬಾ ಎತ್ತರಕ್ಕೆ ಬೆಳಿತಾಳೆ ಎಂದು ಬಾದ್ ಷಾ ತಮ್ಮ ಮಗಳ ಬಗ್ಗೆ ಹೆಮ್ಮೆ ಪಟ್ಟಿದ್ದರು. ಇದೀಗ ಸುದೀಪ್ ಪುತ್ರಿ ಸಾನ್ವಿ ಇನ್ಸ್ಟಾದಲ್ಲಿ ಸ್ಟೋರಿ ಹಾಕುವ ಮೂಲಕ ಖಡಕ್ ಕೌಂಟರ್ ಕೊಟ್ಟಿದ್ದಾರೆ.








