ಹಾವೇರಿ : ರಾಜ್ಯ ರಾಜಕೀಯ, ಸಿಎಂ ಬದಲಾವಣೆ ಪ್ರಕೃತಿ ವಿರೋಪ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹಾವೇರಿ ನಗರದಲ್ಲಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.
ಹಾಲುಮತ ಸಮಾಜ ದೈವಿ ಬಲ ಉಳ್ಳ ಪುರಾತನ ಮತ. ಹಾಲುಮತದಿಂದ ಅಧಿಕಾರ ಬಿಡಿಸಿಕೊಳ್ಳೋದು ಕಷ್ಟ ಅಂತ ಕೋಡಿಮಠ ಸ್ವಾಮೀಜಿ ಮಾರ್ಮಿಕವಾಗಿ ನುಡಿದಿದ್ದಾರೆ. ಭಾರತೀಯ ಪರಂಪರೆಯಲ್ಲಿ ಜ್ಯೋತಿಷ್ಯಕ್ಕೆ ಮಹತ್ವದ ಸ್ಥಾನವಿದೆ. ಈ ಹಿಂದೆ ವ್ಯಾಪಾಸ್ಥರು, ಸಂಕ್ರಾಂತಿ ಫಲ ಕೇಳ್ತಿದ್ರು. ಉದ್ಯಮಿಗಳು ರಾಜಮಹಾರಾಜರು ಸಂಕ್ರಾಂತಿ ಭವಿಷ್ಯ ನಂಬ್ತಿದ್ರು ಅಂತ ಹೇಳಿದ್ದಾರೆ.
ಇನ್ನು ರಾಜ್ಯ ರಾಜಕೀಯದ ಕುರಿತಂತೆಯೂ ಕೋಡಿ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಬಜೆಟ್ ಆಗೋವರೆಗೆ ಸಿಎಂ ಕುರ್ಚಿಗೆ ಏನೂ ತೊಂದರೆ ಇಲ್ಲ ಅಂತ ಸ್ವಾಮೀಜಿ ಹೇಳಿದ್ದಾರೆ. ಬಜೆಟ್ ಬಳಿಕ ಅವರಾಗೇ ಬಿಟ್ಟರೆ ಬೇರೆಯವರಿಗೆ ಸಿಎಂ ಆಗೋ ಯೋಗ ಇದೆ ಅಂತಲೂ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ ತಿಂಗಳ ನಂತರ ಇನ್ನೂ ಸಾವು ನೋವು ಜಾಸ್ತಿ ಆಗುತ್ತೆ ಎಂದಿದ್ದಾರೆ. ಅಂಬಲಿಯು ಹಳಸೀತು, ಕಂಬಳಿಯು ಹಾಸೀತು ಅಂತ ಹೇಳಿದ್ದೆ. ಕೈಲಾಸದಲ್ಲಿ ಕೈ ಪೂಜೆ ಮಾಡುತ್ತೆ ಅಂತಾನೂ ಹೇಳಿದ್ದೆ. ಹಕ್ಕ ಬುಕ್ಕರು ವಿಜಯ ನಗರ ಸಾಮ್ರಾಜ್ಯ ಉಳಿಸಿದರು, ಸಂಗೊಳ್ಳಿ ರಾಯಣ್ಣ ಕಿತ್ತೂರು ಸಾಮ್ರಾಜ್ಯ ಉಳಿಸಿದರು, ಈ ಕುರುಬ ಸಮಾಜದವರು ಪ್ರಕೃತಿಯಲ್ಲಿ ಭವಿಷ್ಯ ಕಂಡವರು ಎಂದಿದ್ದಾರೆ.








