ಬೆಂಗಳೂರು : ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕಾರ್ಯಾತ್ಮಕ ಗೃಹನಳ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಶೇ.100 ರಷ್ಟು ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಗ್ರಾಮ/ಗ್ರಾ.ಪಂಗಳಲ್ಲಿ ʼಹರ್ ಘರ್ ಜಲ್ʼ ಎಂದು ಘೋಷಿಸಲಾಗುತ್ತದೆ. ಹಾಗೂ ಇದಕ್ಕಾಗಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಒಪ್ಪಿಗೆ ಪಡೆಯಲಾಗುತ್ತದೆ.
ʼಹರ್ ಘರ್ ಜಲ್ʼ ಗ್ರಾಮ ಘೋಷಣೆಗೆ ಗ್ರಾಮ ಪಂಚಾಯಿತಿಯು ಈ ಕೆಳಗಿನ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಈ ಮೂಲಕ ಜಲಜೀವನ್ ಮಿಷನ್ ಯೋಜನೆಯನ್ನು ಯಶಸ್ವಿವಾಗಿ ಅನುಷ್ಠಾನಗೊಳಿಸಲು ಸಾಧ್ಯ.
ಅನುಸರಿಸಬೇಕಾದ ಮಾನದಂಡಗಳು:
1. ಗ್ರಾಮದ ಪ್ರತಿ ಮನೆಗೂ ಕಾರ್ಯಾತ್ಮಕ ಗೃಹನಳ ಸಂಪರ್ಕ ಒದಗಿಸುವುದು
2. ಕಾಮಗಾರಿಯ ಪ್ರಗತಿಯನ್ನು ಯೋಜನೆಯ IMIS ದಾಖಲಿಸುವುದು
3.ಗ್ರಾಮದಲ್ಲಿರುವ ಅಂಗನವಾಡಿ, ಸರ್ಕಾರಿ ಶಾಲೆ, ಸಮುದಾಯ ಭವನಗಳ ಅಗತ್ಯತೆಗೆ ತಕ್ಕಂತೆ ನಳ ಸಂಪರ್ಕ ನೀಡಿ ಶುದ್ಧ ನೀರು ಒದಗಿಸುವುದು