ಬೆಂಗಳೂರು : ರಾಜ್ಯದ ಶಾಲಾ ಮುಖ್ಯ ಶಿಕ್ಷಕರು ಶಾಲೆಯಿಂದ ಅನ್ಯ ಕಾರ್ಯಕ್ಕೆ ತೆರಳುವಾಗ ದಾಖಲೆಯನ್ನು ನಿರ್ವಹಿಸುವುದು ಕಡ್ಡಾಯ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಿಕ್ಷಣ ಇಲಾಖೆಯ ಆದೇಶದಲ್ಲಿ ಏನಿದೆ?
ಮೇಲಿನ ವಿಷಯ ಸಂಬಂಧಿಸಿದಂತೆ ಉಲ್ಲೇಖಿತ ಟಿಪ್ಪಣಿ ದಿನಾಂಕ: 21-09-2024 ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ, ಮುಖ್ಯ ಶಿಕ್ಷಕರು ಶಾಲೆಯ ಸಮಯದಲ್ಲಿ ಶಾಲೆಯಲ್ಲಿ ಉಪಸ್ಥಿತರಿಲ್ಲದೇ ಸಭೆ ಮತ್ತು ಸಮಾರಂಭಕ್ಕೆ ತೆರಳಿರುವುದಾಗಿ ತಿಳಿದುಬಂದಿದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಾಧ್ಯವಾಗುತ್ತಿರುವುದಿಲ್ಲ. ಪ್ರಯುಕ್ತ ಮುಖ್ಯ ಶಿಕ್ಷಕರು ಇನ್ನು ಮುಂದೆ ಸಭೆ/ಸಮಾರಂಭಗಳಿಗೆ ತೆರಳುವ ನಮಯದಲ್ಲಿ ಚಲನ ವಲನ ವಹಿಯಲ್ಲಿ ನಮೂದಿಸಿ ಸಮಾರಂಭದ ಆಹ್ವಾನ ಪತ್ರಿಕೆ/ಸಭಾ ಸೂಚನಾ ಪತ್ರವನ್ನು ಲಗತ್ತಿಸುವಂತೆ ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ನಿರ್ದೇಶಿಸುವಂತೆ ಸೂಚಿಸಿರುತ್ತಾರೆ.
ಮುಖ್ಯ ಶಿಕ್ಷಕರು ಇನ್ನು ಮುಂದೆ ಸಭೆ/ ಸಮಾರಂಭಗಳಿಗೆ ತೆರಳುವ ಸಮಯದಲ್ಲಿ ಚಲನ ವಲನ ವಹಿಯಲ್ಲಿ ಕಡ್ಡಾಯವಾಗಿ ನಮೂದಿಸಿ ಸಮಾರಂಭದ ಆಹ್ವಾನ ಪತ್ರಿಕೆ/ ಸಭಾ ಸೂಚನಾ ಪತ್ರವನ್ನು ಲಗತ್ತಿಸುವಂತೆ ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಿದೆ.