ವಿಜಯಪುರ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯ ಪಾಕಿಸ್ತಾನದ ಒಂದು ಭಾಗದಂತಾಗಿದೆ. ಮದರಸಾಗಳಿಗೆ ಹಣ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಉರ್ದು ಶಾಲೆಗಳಿಗೆ 100 ಕೋಟಿ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಮದರಸಾದಲ್ಲಿ ದೇಶದ್ರೋಹಿ ವಿಚಾರಗಳನ್ನು ಕಲಿಸುತ್ತಾರೆ. ಇಸ್ಲಾಂ ಎಂದರೆ ಅನ್ಯ ಧರ್ಮಗಳನ್ನು ನಾಶಪಡಿಸುವುದು ಎಂದರ್ಥ ಎಂದು ಶಾಸಕ ಬಚನಗೌಡ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅನ್ಯಕೋಮಿನವರಿಗೆ ಸರ್ಕಾರದ ಬಗ್ಗೆ ಸ್ವಲ್ಪವೂ ಭಯ ಇಲ್ಲದಂತಾಗಿದೆ. ಅವರು ಸ್ವೇಚ್ಛಾಚಾರದಿಂದ ರಾಜ್ಯದಲ್ಲಿ ಜೀವನ ಮಾಡುತ್ತಿದ್ದಾರೆ. ಸಚಿವರು ಕೂಡ ಏನನ್ನು ಮಾಡುತ್ತಿಲ್ಲ ಅವರೆಲ್ಲ ಜೀರೋ ಆಗಿದ್ದಾರೆ. ತಮ್ಮ ಸ್ಥಾನಕ್ಕೆ ಡಾ.ಜಿ ಪರಮೇಶ್ವರ್ ರಾಜೀನಾಮೆ ನೀಡುತ್ತಿಲ್ಲ. ಸಿಎಂಗೆ ಹೇಳಿ ಬೇರೆ ಇಲಾಖೆಯನ್ನಾದರೂ ತೆಗೆದುಕೊಳ್ಳಲಿ ಎಂದು ಗ್ರಹದ ಚಿವರ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಇರೋವರ್ಗು ಮುಸ್ಲಿಮರಿಗೆ ನಮ್ಮನ್ನು ಏನು ಮಾಡೋಕೆ ಆಗಲ್ಲ ಎಂಬ ಧೈರ್ಯ ಬಂದಿದೆ. ಇದನ್ನೆಲ್ಲ ವಿರೋಧಿಸಿ ಹೋರಾಟ ಮಾಡಲು ಬಿಜೆಪಿಯು ಕೂಡ ವಿಫಲವಾಗಿದೆ.ಕೇಜೆ ಹಳ್ಳಿ ಡಿಜೆ ಹಳ್ಳಿ ಗಲಾಟೆ ವೇಳೆ ಎನ್ಕೌಂಟರ್ ಮಾಡಬೇಕಿತ್ತು. ಆಗ ಎನ್ಕೌಂಟರ್ ಮಾಡಿದರೆ ಸರಿಯಾಗಿ ಇರುತ್ತಿತ್ತು. ನಮ್ಮವರು ಮಾಡಿದ ತಪ್ಪಿನಿಂದಲೇ ಹಿಂದೂಗಳು ಬೇಸರವಾದರು. ಹಾಗಾಗಿ ರಾಜ್ಯದಲ್ಲಿ ಕೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. 136 ಸ್ಥಾನ ಬರಲು ಬಿಜೆಪಿ ಮೇಲಿನ ಹಿಂದೂಗಳ ಬೇಸರವೇ ಕಾರಣ ನನ್ನ ಬಿಟ್ಟು ಬೇರೆ ಯಾರು ಅನ್ಯಕೋಮಿನವರ ಬಗ್ಗೆ ಮಾತನಾಡಲ್ಲ. ಪಾಕಿಸ್ತಾನ ಹಿಂದುಗಳ ಬಗ್ಗೆ ಮಾತನಾಡುವುದಿದ್ದರೆ ನನಗೆ ಹೇಳುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊಂದಾಣಿಕೆಯ ಗಿರಾಕಿ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದರು.