ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆಯುತ್ತಿದ್ದು, ಈ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಹೂಡಿಕೆದಾರರು ಕೈಗಾರಿಕೆಯನ್ನು ಪ್ರಮೋಟ್ ಮಾಡಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಯನ್ನು ಪ್ರಮೋಟ್ ಮಾಡಬೇಕು ಎಂದು ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಆಯೋಜನೆ ಮಾಡಲಾಗಿದ್ದು, ಸಮಾವೇಶದ ಕುರಿತು ಮಾತನಾಡಿದ ಅವರು, 10 ಜನರಿಂದ ಹಿಡಿದು 100 ಜನರಿಗೆ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಸ್ಥಳೀಯ ಮಸಾಲೆ ಪದಾರ್ಥ, ಬಟ್ಟೆ, ಏರ್ ಕ್ರಾಫ್ಟ್ ಎಲ್ಲವೂ ಇಲ್ಲಿದೆ. 7 ಸೀಟು ಹೊಂದಿರುವ ಏರ್ ಟ್ಯಾಕ್ಸಿ ವಿಮಾನ ಸಿದ್ಧಪಡಿಸಿ ಇಟ್ಟಿದ್ದಾರೆ. ಏರ್ ಟ್ಯಾಕ್ಸಿ ವಿಮಾನವನ್ನು ಪ್ರಕಾಶ್ ಸಿದ್ದ ಪಡಿಸಿದ್ದಾರೆ ಎಂದರು.
ಅರಮನೆ ಮೈದಾನದಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಿ ಬರಬಹುದು. ಇದೆಲ್ಲವೂ ಸಾಧ್ಯವಿದೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ಕೊಡಬೇಕು ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದಿರುವ ಎಲ್ಲರಿಗೂ ಅಭಿನಂದನೆ ನಾವು ಉದಾಸೀನ ಮಾಡಬಾರದು ಪ್ರೋತ್ಸಾಹ ಕೊಡಬೇಕು ಸರ್ಕಾರದ ಅನುದಾನ ಯಾರು ದುರುಪಯೋಗ ಮಾಡಿಕೊಳ್ಳಬಾರದು ಅವರು ಬದುಕಬೇಕು ರಾಜ್ಯವು ಬದುಕಬೇಕು ಎಂದು ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.