ಬೀದರ್ : ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ದಿಟ್ಟ ಕ್ರಮ ಕೈಗೊಂಡಿದ್ದು, ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿದೆ. ಈ ವಿಚಾರವಾಗಿ ಸಚಿವ ರಹೀಮ್ ಖಾನ್ ಪ್ರತಿಕ್ರಿಯೆ ನೀಡಿದ್ದು ಸಿಂಧೂ ನದಿ ನೈಸರ್ಗಿಕವಾಗಿ ಹರಿಯುತ್ತಿದ್ದು ಆ ನೀರನ್ನು ನಿಲ್ಲಿಸಲು ಪ್ರಧಾನಿ ಮೋದಿಗೆ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈಸರ್ಗಿಕವಾಗಿ ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ. ಹಿಗಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹರಿದು ಹೋಗುವುದನ್ನು ನಿಲ್ಲಿಸೋಕೆ ಆಗುವುದಿಲ್ಲ ಎಂದು ಸಚಿವ ರಹೀಂ ಖಾನ್ ಹೇಳಿದ್ದಾರೆ.
ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ಬಂದ್ ಮಾಡಲು ಮೋದಿಗೆ ಬರಲ್ಲ. ಸಿಂಧೂ ನದಿ ನೀರು ಬಂದ್ ಮಾಡಬೇಕು ಎಂದರೆ 20 ವರ್ಷ ಬೇಕು. ವಾಟರ್ ಹಿಸಾಬ್ ಮಾಡಬೇಕು ಎದರೆ ಅದಕ್ಕೆ ಬೇಕಾದ ಡ್ಯಾಂ ಮತ್ತು ಕೆನಾಲ್‌ಗಳನ್ನು ನಿರ್ಮಾಣ ಮಾಡಬೇಕು. ನಾವು ಯಾವುದು ಕೆಲಸ ಮಾಡೋದಕ್ಕೆ ಸಾಧ್ಯವಾಗುತ್ತದೆಯೋ ಅದನ್ನಷ್ಟೇ ಮೋದಿ ಹೇಳಬೇಕು ಎಂದರು.